ಪುತ್ತೂರು : ಸಂಘ ಪರಿವಾರ ಹಾಗೂ ಸಂಪ್ಯ ಠಾಣೆಯ ಪಿ ಎಸ್ ಐ ಅಬ್ದುಲ್ ಖಾದರ್ ನಡುವಿನ ಸಂಘರ್ಷ ಇಂದೂ ಮುಂದುವರಿದಿದೆ. ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ದೀಪಕ್ ರಾವ್ ಕೊಲೆಯನ್ನು ಖಂಡಿಸಿ ಸಂಪ್ಯ ಠಾಣೆಯ ಎದುರಿನ ಮಾಣಿ -ಮೈಸೂರು ರಾಜ್ಯ ರಸ್ತೆಯಲ್ಲಿ ರಾಸ್ತಾ ರೋಕೋ ಪ್ರತಿಭಟನೆ ನಡೆಸಲು ಮುಂದಾದಾಗ ಪ್ರತಿಭಟನೆಕಾರರ ಮತ್ತು ಪೊಲೀಸರ ಮಧ್ಯೆ ಹೊಯ್ ಕೈ ನಡೆದಿದೆ.
ಕಾಟಿಪಳ್ಳ ದೀಪಕ್ ರಾವ್ ಕೊಲೆ ಪ್ರಕರಣ ಹಾಗೂ ಪುತ್ತೂರು ಸಂಪ್ಯ ಠಾಣಾ ಎಸ್.ಐ ಖಾದರ್ ಹಾಗೂ ಮೂರು ಪೊಲೀಸರ ವಿರುದ್ಧ ನಡೆದ ರಾಸ್ತಾರೋಕೋ ಪ್ರತಿಭಟನೆಯ ವೇಳೆ ಪೊಲೀಸರು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಟಂದೂರು ಮೈಮೇಲೆ ಕೈ ಹಾಕಿದ್ದಾರೆ ಎಂದು ಅಲ್ಲಿ ಪ್ರತಿಭಟನ ನಿರತರಾಗಿದ್ದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಶ್ರೀನಿವಾಸ್ ಹಾಗೂ ಪೊಲೀಸರೊಂದಿಗೆ ಪ್ರತಿಭಟನಕಾರರಿಗೆ ಮಾತಿನ ಚಕಮಕಿ ನಡೆಯಿತು. ಜಿಲ್ಲಾಧ್ಯಕ್ಷರನ್ನು ರಸ್ತೆಯಿಂದ ಎಳೆದುಕೊಂಡು ಬಂದು ದರ್ಪ ತೋರಿಸಿದರು ಎಂದು ಸಂಜೀವ ಮಟಂದೂರು ಕೂಡಾ ಆರೋಪಿಸಿದರು. ಇದರಿಂದ ಮತ್ತಷ್ಟು ಕೆರಳಿದ ಪ್ರತಿಭಟನಾಕಾರರು ಪೊಲೀಸರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಹಿಳೆ ಕಾರ್ಯಕರ್ತೆಯರು ಇರುವಾಗ ಎಸ್ ಐ ಅಬ್ದುಲ್ ಖಾದರ್ ಅವರು ಅವಾಚ್ಯ ಹಾಗೂ ತುಚ್ಚ ಪದ ಬಳಕೆ ಮಾಡಿ ಚನಿಲ ತಿಮಪ್ಪ ಶೆಟ್ಟಿ ಹಾಗೂ ಸಂಜೀವ ಮಠ೦ದೂರು ಅವರನ್ನು ನಿಂದಿಸಿದ್ದಾರೆ ಎಂದೇ ಅದೇ ಸಂಧರ್ಭದಲ್ಲಿ ಕೆಲ ಕಾರ್ಯಕರ್ತರು ಅಕ್ರೋಶ ವ್ಯಕ್ತ ಪಡಿಸಿದರು. ಮಾತಿನ ಚಕಮಕಿಗೂ ಮೊದಲು ರಸ್ತೆ ರೋಕೋ ನಡೆಸಿ ಮುಖಂಡರುಗಳು ಮಾತನಾಡಿದರು .
ಮಾತಿನ ಚಕಮಕಿಯ ವಿಡಿಯೋ ಇಲ್ಲಿದೆ.
https://youtu.be/QEm4DR4zT78