Recent Posts

Sunday, January 19, 2025
ಸುದ್ದಿ

ಜೀವನದಲ್ಲಿ ಸಾರ್ಥಕತೆ ಮೆರೆದ ವೈದ್ಯ ಡಾ.ಎಂ.ವೆಂಕಟರಮಣ ಭಟ್ ಅವರಿಗೆ ಸನ್ಮಾನ – ಕಹಳೆ ನ್ಯೂಸ್

ಅತ್ಯಂತ ಪವಿತ್ರ ಮತ್ತು ಪೂಜ್ಯನೀಯ ವೃತ್ತಿಗಳಲ್ಲಿ ವೈದ್ಯ ವೃತ್ತಿ ಕೂಡ ಒಂದು. ಈ ದಿನ ಭಾರತದಲ್ಲಿ ವೈದ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ನಮ್ಮ ಆಪತ್ಭಾಂಧವ ವೈದ್ಯರಿಗೆ ಶುಭಾಶಯ ಹೇಳುವ ದಿನವಾಗಿದೆ. ನಮ್ಮ ಸುತ್ತ ಮುತ್ತ ಪರಿಸರದಲ್ಲಿ ಅದೆಷ್ಟೋ ಮಂದಿ ವೈದ್ಯರಿದ್ದಾರೆ. ಈ ಪೈಕಿ ಜನರಿಗೆ ಸಕಾಲದಲ್ಲಿ ವೈದ್ಯಕೀಯ ನೆರವು ನೀಡಿ ತನ್ನ ಸಾರ್ಥಕತೆ ಮೆರೆಯುತ್ತಿರುವವರು ಡಾ. ಎಂ ವೆಂಕಟರಮಣ ಭಟ್.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರ ಸಾಧನೆಯನ್ನು ಮನಗಂಡು, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮೈರೋಳ್ತಡ್ಕದಲ್ಲಿ ನಡೆದ ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಬೆಳ್ತಂಗಡಿ, ಇದರ ವತಿಯಿಂದ `ರಿಷಿ ಹಸಿರು ಹಬ್ಬ’ ಕಾರ್ಯಕ್ರಮದಲ್ಲಿ ಅತ್ಯಂತ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಡಾ.ಎಂ.ವೆಂಕಟರಮಣ ಭಟ್, ಬಂಟ್ವಾಳ ತಾಲೂಕು ಕೆದಿಲ ಮುರ್ಗಾಜೆಯ ಶ್ರೀ ಶಿವರಾಮ್ ಭಟ್ ಹಾಗೂ ಶ್ರೀಮತಿ ಗೌರಿ ದಂಪತಿಯ ಮೂವರು ಮಕ್ಕಳಲ್ಲಿ ಕೊನೆಯವರು. ಆಗಸ್ಟ್ 3 1962ರಲ್ಲಿ ಹುಟ್ಟಿದ ಇವರು ಬಂಟ್ವಾಳದ ಕೆದಿಲ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಹಾಗೂ ಪುತ್ತೂರಿನ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿ ತಾರಾನಾಥ ಆಯುರ್ವೇದ ಕಾಲೇಜು ಬಳ್ಳಾರಿ ಹಾಗೂ ಬೆಂಗಳೂರು ಯೂನಿವರ್ಸಿಟಿ ಕಾಲೇಜಿನಲ್ಲಿ ತಮ್ಮ ವೈದ್ಯಕೀಯ ಶಿಕ್ಷಣ ಮುಗಿಸಿದರು. ವೈದ್ಯಕೀಯ ಕ್ಷೇತ್ರದ ವೃತ್ತಿ ಜೀವನವನ್ನು ದಿನಾಂಕ 06/09/1988 ರಂದು ಆ ಕಾಲದಲ್ಲಿ ಕುಗ್ರಾಮವಾಗಿದ್ದ ಪದ್ಮುಂಜ ಎಂಬ ಸಣ್ಣ ಊರಿನಲ್ಲಿ ಪ್ರಾರಂಭಿಸಿದರು. ವೈದ್ಯೋ ನಾರಾಯಣೋ ಹರಿಃ ಎಂಬ ನುಡಿಗೆ ಚ್ಯುತಿ ಬಾರದಂತೆ ತಮ್ಮ ವೃತ್ತಿ ಸೇವೆಯನ್ನು 31 ವರ್ಷಗಳಿಂದ ನಡೆಸುತ್ತಾ ಬಂದವರು.

ಊರಿನ ಜನರಿಗೆ ಸಕಾಲದಲ್ಲಿ ವೈದ್ಯಕೀಯ ನೆರವು, ಚಿಕಿತ್ಸೆ, ಸಲಹೆ ನೀಡುತ್ತಾ ತನ್ನ ಸಾರ್ಥಕತೆ ಮೆರೆಯುತ್ತಿದ್ದಾರೆ. ಜನ ಸೇವೆಯೇ ಜನಾರ್ಧನ ಸೇವೆಯೆಂದು ಅತಿ ಕಡಿಮೆ ದರದಲ್ಲಿ ಮತ್ತು ಉಚಿತವಾಗಿ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದಾರೆ.