Recent Posts

Monday, January 20, 2025
ಸುದ್ದಿ

ಸಿಎಂ ಕುಮಾರಸ್ವಾಮಿ ಕುರ್ಚಿಗೂ ಬೀಳುತ್ತಾ ಚಂದ್ರ ಗ್ರಹಣದ ಕರಿ ಛಾಯೆ ..? – ಕಹಳೆ ನ್ಯೂಸ್

ಜುಲೈ ತಿಂಗಳಿನಲ್ಲಿ ಖಂಡಗ್ರಾಸ ಚಂದ್ರಗ್ರಹಣ ಗೋಚರಿಸಲಿದೆ. ಈ ಗ್ರಹಣದ ವಿಶೇಷ ಎಂದರೆ ರವಿಗೂ ಭಾವ ಸಂಧಿ ಕಾಲ, ಚಂದ್ರನಿಗೂ ಭಾವ ಸಂಧಿ ಕಾಲ. ಅಂದರೆ ರವಿಯು ಮಿಥುನ ರಾಶಿಯಿಂದ ಕರ್ಕ ರಾಶಿಗೆ ಪ್ರವೇಶಿಸುವ ಸಂಕ್ರಮಣ ಕಾಲ. ಚಂದ್ರನೂ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಒಂದು ಸಂಧಿಕಾಲ. ಇದು ಸಂಕ್ರಮಣ ಗ್ರಹಣವೂ, ರಾಶಿ ಸಂಧಿ ಗ್ರಹಣವೂ ಆಗುವುದರಿಂದ ಅರಿಷ್ಟಗಳೇ ಜಾಸ್ತಿ ಎನ್ನುತ್ತಾರೆ ಜ್ಯೋತಿಷಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಚಂದ್ರನಿಗೆ ಹಿಡಿಯುವ ಕೇತು ಗ್ರಹಣವು ಅಗ್ನಿ ತತ್ವ ಧನುರಾಶಿಯಲ್ಲಿ ಪ್ರಾರಂಭವಾಗಿ ಭೂ ತತ್ವದ ಮಕರದಲ್ಲಿ ಮೋಕ್ಷ. ಹಾಗೆಯೇ ಮಿಥುನ ವಾಯು ತತ್ವದಿಂದ ಕರ್ಕ ಜಲ ತತ್ವಕ್ಕೆ ರವಿಯೂ ಹೋಗುವ ಕಾಲ. ಇದರಿಂದ ಧನು, ಮಕರ, ಕುಂಭ, ವೃಷಭ, ಮಿಥುನ, ಕರ್ಕ, ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಅರಿಷ್ಟ ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದ ಭಿನ್ನಮತದಲ್ಲಿ ಬೇಯುತ್ತಿರುವ ಸರಕಾರಗಳು ಪತನಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ ತಕ್ಕುತಾದಾಗಿ ಕರ್ನಾಟಕದಲ್ಲಿರುವ ಮೈತ್ರಿ ಸರಕಾರದ ಒಂದು ವಿಕೆಟ್ ಇಂದು ಪತನವಾಗಿದೆ. ಜೊತೆಗೆ ಏಳು ವಿಕೆಟ್‍ಗಳು ಪತನವಾಗುವ ಲಕ್ಷಣಗಳು ಹೆಚ್ಚಾಗಿವೆ. ಒಂದು ವೇಳೇ ಹೀಗಾದರೆ ಗ್ರಹಣ ಸಂಭವಿಸುವ ಮೊದಲೇ ಗ್ರಹಣದ ಕರಿ ಛಾಯೆ ಸಮ್ಮಿಶ್ರ ಸರ್ಕಾರ ಮೇಲೂ ಬೀಳಲಿದೆ ಎಂದು ಹೇಳಬಹುದು.