ಮಂಗಳೂರು: ದೀಪಕ್ ರಾವ್ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆಯಾಗಲಿ ಎಂದು ದೀಪಕ್ ಕೆಲಸಕ್ಕಿದ್ದ ಅಂಗಡಿ ಮಾಲೀಕ ಮಜೀದ್ ಗುರುವಾರ ಕಹಳೆ ನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ.
ದೀಪಕ್ ನನ್ನ ಜತೆ 7 ವರ್ಷ ಕೆಲಸ ಮಾಡಿದ್ದ. ಸಿಮ್ ವಿತರಕನಾಗಿ ಕೆಲಸ ನಿರ್ವಹಿಸುತ್ತಿದ್ದ ದೀಪಕ್ ಒಳ್ಳೆಯ ಹುಡುಗ, ಎಲ್ಲರ ಜತೆ ಸ್ನೇಹ ಮನೋಭಾವ ಹೊಂದಿದ್ದ. ಆತನ ಹತ್ಯೆಗೆ ಕಾರಣ ಏನೆಂಬುದು ನನಗೆ ಗೊತ್ತಿಲ್ಲ?. ಯಾರ ಮೇಲೂ ಆತ ದ್ವೇಷವನ್ನು ಹೊಂದಿರಲಿಲ್ಲ. ಆತನ ಸಾವನ್ನು ನನಗೆ ಊಹಿಸಲೂ ಸಾಧ್ಯವಾಗುತ್ತಿಲ್ಲ ಎಂದು ದೀಪಕ್‌ನನ್ನು ನೆನೆದು ಮಜೀದ್ ಕಣ್ಣೀರಿಟ್ಟರು.
ಶಾಸಕರಿಂದ ಕುಟುಂಬಕ್ಕೆ 5 ಲಕ್ಷ ಪರಿಹಾರ
ದೀಪಕ್ ರಾವ್ ಕುಟುಂಬಕ್ಕೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯಿದ್ದೀನ್ ಬಾವ ನೆರವು ನೀಡಿದ್ದು, ವೈಯಕ್ತಿಕವಾಗಿ 5 ಲಕ್ಷ ರೂಪಾಯಿ ಪರಿಹಾರ ಧನ ನೀಡೋದಾಗಿ ಘೋಷಣೆ ಮಾಡಿದ್ದಾರೆ.
(ಕಹಳೆ ನ್ಯೂಸ್)