Tuesday, January 21, 2025
ರಾಜಕೀಯ

ಶಾಸಕ ಆನಂದ್ ಸಿಂಗ್ ರಾಜೀನಾಮೆಗೆ ಸಚಿವ ಯುಟಿ ಖಾದರ್ ಪ್ರತಿಕ್ರಿಯೆ – ಕಹಳೆ ನ್ಯೂಸ್

ಮಂಗಳೂರು : ಬಳ್ಳಾರಿ, ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸ್ಪಷ್ಟಪಡಿಸಿದ್ದಾರೆ. ಈ ವಿಚಾರವಾಗಿ ಮಂಗಳೂರಿನಲ್ಲಿ ಸಚಿವ ಯುಟಿ ಖಾದರ್ ಹೇಳಿಕೆ ನೀಡಿದ್ದು, ಈ ಕುರಿತ ಮಾಹಿತಿ ನನಗೆ ಗೊತ್ತಿಲ್ಲ, ಮಾಧ್ಯಮ ಮೂಲಕ ಗೊತ್ತಾಯಿತು ಆನಂದ್ ಸಿಂಗ್ ಪಕ್ಷ ಬದ್ದತೆಯ ಶಾಸಕರು, ಮೈತ್ರಿ ಸರಕಾರ ಸುಭದ್ರವಾಗಿದೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ, ಐದು ಶಾಸಕರ ರಾಜೀನಾಮೆಯಿಂದ ಸರ್ಕಾರ ಕೆಡವಲು ಸಾಧ್ಯನಾ..? ಕಳೆದ ಒಂದೂವರೆ ವರ್ಷಗಳಿಂದ ಈ ತರಹದ ಬೆಳವಣಿಗೆ ನಡೀತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು