Tuesday, January 21, 2025
ಸಿನಿಮಾ

ಹಾರರ್ ಚಿತ್ರದ ಮೂಲಕ ಬೆಚ್ಚಿಬೀಳಿಸಿದ್ದ ನಿರ್ದೇಶಕನ ದ್ವಿತೀಯ ಚಿತ್ರ ‘ದಿಯಾ’… – ಕಹಳೆ ನ್ಯೂಸ್

ಕನ್ನಡದಲ್ಲಿ ಹಿಂದೆಲ್ಲಾ ಆಗೊಮ್ಮೆ ಈಗೊಮ್ಮೆ ಹಾರರ್ ಚಿತ್ರಗಳು ಬರುತ್ತಿದ್ದವು. ಆದರೆ ಯಾವಾಗ ‘ರಂಗಿತರಂಗ’ ಎಂಬ ತರಂಗವು ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತೋ, ಅದಾದ ಮೇಲೆ ಸಾಲು ಸಾಲು ಹಾರರ್ ಸಿನೆಮಾಗಳು ಕನ್ನಡದಲ್ಲಿ ಬಿಡುಗಡೆಗೊಂಡು ಅಷ್ಟೇ ವೇಗವಾಗಿ ಮಾಯವಾಗಿದ್ದವು. ಇದಕ್ಕೂ ಮೊದಲು ಬಂದಿದ್ದ ದಿ ಬೆಸ್ಟ್ ಹಾರರ್ ಚಿತ್ರವೆಂದರೆ ‘6-5=2’.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಚಿತ್ರ ಬಿಡುಗೊಡೆಗೊಂಡಿದ್ದೇ ಅತ್ಯಂತ ವಿಭಿನ್ನವಾಗಿ, ಮತ್ತು ವಿಶ್ವ ಸಿನೆಮಾರಂಗದಲ್ಲೇ ಬಹುಷ: ಇದು ಮೊದಲ ಪ್ರಯತ್ನವಿರಬಹುದು. ಅಂದ್ರೆ ‘6-5=2’. ಸಿನೆಮಾ ರೀಲ್ ಅಲ್ಲ ರಿಯಲ್ ಆಗೇ ನಡೆದ ಘಟನಾವಳಿಗಳ ವಿಡಿಯೋಗಳನ್ನು ಕೊಂಚ ಮಟ್ಟಿಗೆ ಎಡಿಟ್ ಮಾಡಿ ಚಿತ್ರಮಂದಿರಕ್ಕೆ ರಿಲೀಸ್ ಮಾಡಿದ್ದು ಎಂದು ಹೇಳಿ ಬಿಡುಗಡೆಗೊಳಿಸಿದವರು ಪ್ರೇಕ್ಷಕರನ್ನು ಮರುಳು ಮಾಡಿ ಬಿಟ್ಟಿದ್ದರು. ಜೊತೆಗೆ ಈ ಸಿನೆಮಾದಲ್ಲಿ ಅರ್ಥಾತ್ ವಿಡಿಯೋದಲ್ಲಿರುವವರು, ಈಗ ಬದುಕಿಯೇ ಇಲ್ಲ ಎಂಬ ಮಾತನ್ನು ನಿಜ ಎಂದು ನಂಬಿ ಸಿನೆಮಾ ನೋಡಿ ಎಂಜಾಯ್ ಮಾಡಿದ್ದರು ಸಿನಿರಸಿಕರು. ಆಮೇಲೆ ಚಿತ್ರದ 50ನೇ ದಿನದ ಸಂಭ್ರಮಾಚರಣೆಗೆ ಆ ಚಿತ್ರದಲ್ಲಿ ಅಭಿನಿಯಿಸಿದವರನ್ನು ನೋಡಿ ಪ್ರೇಕ್ಷಕರು ನಿರ್ದೇಶಕನ ಜಾಣ್ಮೆಯನ್ನು ಕೊಂಡಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಅದೇ ನಿರ್ದೇಶಕ ಅಶೋಕ್ ಒಂದು ದೊಡ್ಡ ಗ್ಯಾಪ್‍ನ ನಂತರ ‘ದಿಯಾ’ ಎಂಬ ರೊಮ್ಯಾಂಟಿಕ್ ಫಿಲ್ಮ್ ಅನ್ನು ಮಾಡಿದ್ದಾರೆ. ಚಿತ್ರದ ಮೊದಲ ನೋಟ ಬಿಡುಗಡೆಗೊಂಡಿದ್ದು. ಲೈಫ್ ಈಸ್ ಫುಲ್ ಆಫ್ ಸರ್ಪ್ರೈಸಸ್ ಎಂಬ ಟ್ಯಾಗ್ ಲೈನ್ ನೀಡಿದ್ದಾರೆ. ಈ ಚಿತ್ರ ಕೇವಲ ಒಂದು ರೊಮ್ಯಾಂಟಿಕ್ ಸಿನಿಮಾವಾಗಿರದೆ ಬೇರೆಯದೇ ಥ್ರಿಲ್ಲಿಂಗ್ ಅಂಶಗಳು ಇರಲಿವೆಯೇ ಅನ್ನೋದನ್ನ ಚಿತ್ರ ಬಂದ ಮೇಲಷ್ಟೇ ತಿಳಿಯ ಬೇಕಿದೆ.