Tuesday, January 21, 2025
ಸುದ್ದಿ

‘ಮಣಿಕರ್ಣಿಕಾ’ ಮಾತುಗಾರರ ವೇದಿಕೆ: ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮ: ಛಲವೊಂದೇ ಮುಖ್ಯ ಸಾಧ – ಕಹಳೆ ನ್ಯೂಸ್

ಪುತ್ತೂರು: ಛಲವು ಪತ್ರಿಕೋದ್ಯಮಕ್ಕೆ ಇರಬೇಕಾದ ಮುಖ್ಯ ಸಾಧನವಾಗಿದೆ. ಅದು ಇದ್ದ ಪಕ್ಷದಲ್ಲಿ ತಾವು ಇದಕ್ಕೆ ಅರ್ಹರು ಮತ್ತು ಒಬ್ಬ ಉತ್ತಮ ಪತ್ರಕರ್ತನಾಗಲು ಸಾಧ್ಯ ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹೆಚ್.ಜಿ. ಶ್ರೀಧರ್ ಹೇಳಿದರು.

ಅವರು ಕಾಲೇಜಿನ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ ಮಣಿಕರ್ಣಿಕಾ ಮಾತುಗಾರರ ವೇದಿಕೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿ ಮಾತನಾಡಿದರು.
ಪದವಿಪೂರ್ವ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಪ್ರಶ್ನೆ ಸಹಜ. ಆ ಪ್ರಶ್ನಗೆ ಉತ್ತರ ಕಂಡುಕೊಳ್ಳುವುದು ಮುಖ್ಯ ಎಂದರಲ್ಲದೆ ಪತ್ರಿಕೋದ್ಯಮ ಉತ್ತಮ ಅವಕಾಶ ಇರುವ ಒಂದು ವೇದಿಕೆ. ಒಬ್ಬ ವರದಿಗಾರನಿಗೆ ಭಾಷೆ, ಬರವಣಿಗೆ ಹಾಗೂ ಉಚ್ಛರಣಾ ಸ್ಪಷ್ಟತೆ ಮುಖ್ಯ ಎಂದರು. ಪತ್ರಿಕೋದ್ಯಮ ಆಯ್ಕೆ ಮಾಡಿದರೆ ತಮ್ಮ ಗುರಿಯನ್ನು ಸಾಧಿಸುವುದು ಕಷ್ಟಸಾಧ್ಯವಲ್ಲ. ಅಲ್ಲದೆ ಒಬ್ಬ ವಿದ್ಯಾರ್ಥಿಗೆ ಕಲಿಕೆಯ ಕುರಿತ ಸೆಳೆತ ಇರಬೇಕು ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್‍ಕುಮಾರ್ ಕಮ್ಮಜೆ ಮಾತನಾಡಿ, ತಮ್ಮ ಕಾರ್ಯದಿಂದ ಹಿಂಜರಿಯುವ ವಿದ್ಯಾರ್ಥಿಗಳು ಎಂದಿಗೂ ತಮ್ಮ ಗುರಿಯನ್ನು ತಲುಪಲು ಕಷ್ಟಸಾಧ್ಯ. ತಮ್ಮ ಪ್ರತಿಭೆಯನ್ನು ಹೊರತರುವುದಕ್ಕೆ ಪತ್ರಿಕೋದ್ಯಮ ಒಂದು ಉತ್ತಮ ವೇದಿಕೆಯಾಗಿದೆ. ಅಲ್ಲದೆ ಇಲ್ಲಿ ಮುಕ್ತ ಅವಕಾಶವಿದೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮಕ್ಕೆ ಆಗಮಿಸಿದ ಇನ್ನೋರ್ವ ಅತಿಥಿ ಆಂಗ್ಲ ವಿಭಾಗದ ಉಪನ್ಯಾಸಕ ಗಣೇಶ್ ಪ್ರಸಾದ್ ಮಾತನಾಡಿ, ಈ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಎಷ್ಟೋ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉದ್ಯೋಗದಲ್ಲಿ ಇದ್ದಾರೆ. ತಾವು ಆಯ್ದ ವಿಷಯವನ್ನು ನಾವು ಪ್ರೀತಿಸಿದರೆ ಅದು ಎಂದೂ ನಮ್ಮನ್ನು ಕೈ ಬಿಡಲಾರದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯಾ ಪಿ. ಆರ್. ನಿಡ್ಪಳ್ಳಿ ಪ್ರಥಮ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯದರ್ಶಿ ತೇಜಶ್ರೀ ವೆಂಕಟೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ ಅನಘಾ ಶಿವರಾಮ್ ಸ್ವಾಗತಿಸಿ, ವಿದ್ಯಾರ್ಥಿನಿ ದೀಕ್ಷಿತಾ ವಂದಿಸಿದರು. ರಾಮಕಿಶನ್ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು.