Tuesday, January 21, 2025
ಸುದ್ದಿ

ಶ್ರೀರಾಮ ಪ್ರೌಢಶಾಲಾ ಸುರಕ್ಷಾ ಸಮಿತಿ ವತಿಯಿಂದ ವಾಹನ ಸಂಚಾರಿ ನಿಯಮ ಮಾಹಿತಿ ಕಾರ್ಯಕ್ರಮ – ಕಹಳೆ ನ್ಯೂಸ್

ದಿನಾಂಕ 1-7-2019 ರಂದು ಶ್ರೀರಾಮ ಪ್ರೌಢಶಾಲೆಯಲ್ಲಿ ಸುರಕ್ಷಾ ಸಮಿತಿ ವತಿಯಿಂದ ಖಾಸಗಿ ವಾಹನದಲ್ಲಿ ಬರುವ ಪೋಷಕರಿಗೆ ವಾಹನ ಸಂಚಾರಿ ನಿಯಮ ಮಾಹಿತಿ ಕಾರ್ಯಕ್ರಮ ನಡೆಯಿತು.

ಮಕ್ಕಳ ಹಿತದೃಷ್ಟಿಯಿಂದ ವಾಹನ ಸಂಚಾರಿ ನಿಯಮದ ಬಗ್ಗೆ ಪೋಷಕರು ತಿಳಿದುಕೊಂಡು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯವಾಗಿದೆ. ಸಂಚಾರಿ ನಿಯಮವನ್ನು ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಿರಿಯರು ಮಕ್ಕಳನ್ನು ವ್ಯಸನದಿಂದ ದೂರ ಇಡುವಂತೆ ಮಾಡಿ ವ್ಯಸನ ಮುಕ್ತರನ್ನಾಗಿ ಮಾಡಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಪೋಷಕರು ತನ್ನ ಮಕ್ಕಳಿಗೆ ಅತಿಯಾದ ಪ್ರೀತಿ ತೋರಿಸುವುದರಿಂದ ಮಗುವಿನ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಆದ್ದರಿಂದ ಮಗುವಿಗೆ ಸಣ್ಣ ವಯಸ್ಸಿನಲ್ಲೇ ಅಂದರೆ 18 ವಯಸ್ಸಿನ ಒಳಗಿನ ಮಕ್ಕಳಿಗೆ ಮೊಬೈಲು ಬಳಕೆ, ವಾಹನ ಚಲಾವಣೆ ಮಾಡುವುದನ್ನು ಕೆಟ್ಟ ವ್ಯಸನಗಳನ್ನು ಮಾಡದೆ ಹಾಗೆ ಪೋಷಕರು ತಿಳಿ ಹೇಳಬೇಕೆಂದು ಬಂಟ್ವಾಳ ಸಂಚಾರಿ ಠಾಣೆ ಪಿ.ಎಸ್.ಐ. ರಾಮ ನಾಯಕ್‍ರವರು ಪೋಷಕರಿಗೆ ತಿಳಿಸಿದರು. ಇವರು ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ಸುರಕ್ಷಾ ಸಮಿತಿ ವತಿಯಿಂದ ನಡೆದ “ವಾಹನ ಸಂಚಾರಿ ನಿಯಮ ಮಾಹಿತಿ “ ಕಾರ್ಯಕ್ರಮದಲ್ಲಿ ಪೋಷಕರಿಗೆ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಬಂಟ್ವಾಳ ನಗರ ಠಾಣಾ ಎ.ಎಸ್.ಐ. ಆದ ಬಾಲಕೃಷ್ಣ, ಶೈಲೇಶ್ ಎ.ಎಸ್.ಐ. ಸಿಬ್ಬಂದಿಗಳಾದ ಮಲ್ಲೇಶ್ ಹಾಗೂ ಮಲ್ಲಿಕ್, ಮಾತೃಭಾರತಿ ಪ್ರಮುಖರಾದ ಮಮತಾ, ಶ್ರೀರಾಮ ಪ್ರೌಢಶಾಲಾ ಮುಖ್ಯಶಿಕ್ಷಕಿ ವಸಂತಿ ಕುಮಾರಿ, ಪ್ರೌಢಶಾಲಾ ಶಿಕ್ಷಕರು, ಖಾಸಗಿ ವಾಹನಗಳಲ್ಲಿ ಬರುವ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಹಶಿಕ್ಷಕರಾದ ಜಿನ್ನಪ್ಪರವರು ಸ್ವಾಗತಿಸಿ, ಹಿರಿಯ ಶಿಕ್ಷಕಿ ಶಾಂಭವಿ ಇವರು ವಂದಿಸಿದರು.