ಜೆಸಿಐ ನೆಕ್ಕಿಲಾಡಿ ಘಟಕದಿಂದ ರಾಷ್ಟ್ರೀಯ ವೈದ್ಯ ದಿನಾಚರಣೆ : ಉಪ್ಪಿನಂಗಡಿಯ ಖ್ಯಾತ ವೈದ್ಯರಿಗೆ ಸನ್ಮಾನ – ಕಹಳೆ ನ್ಯೂಸ್
ಉಪ್ಪಿನಂಗಡಿ: ಜೆಸಿಐ ನೆಕ್ಕಿಲಾಡಿ ಘಟಕದ ವತಿಯಿಂದ ರಾಷ್ಟ್ರೀಯ ವೈದ್ಯ ದಿನಾಚರಣೆಯನ್ನ ಆಚರಿಸಲಾಯಿತು. ಉಪ್ಪಿನಂಗಡಿಯ ಖ್ಯಾತ ವೈದ್ಯರುಗಳಾದ ಡಾ. ಕೆ ಜಿ ಭಟ್, ಡಾ.ರಾಜರಾಮ್ ಕೆ ಬಿ, ಡಾ.ನಿರಂಜನ್.ರೈ ಇವರನ್ನು ಸನ್ಮಾನಿಸಲಾಯಿತು.
ಉಪ್ಪಿನಂಗಡಿಯ ಭಟ್ ನರ್ಸಿಂಗ್ ಹೋಮ್‍ನ ಮಾಲಕರಾದ ಡಾ ಕೆ. ಜಿ ಭಟ್ ಉಪ್ಪಿನಂಗಡಿಯಲ್ಲಿ 58 ವರ್ಷಗಳಿಂದ ಜನಸೇವೆಯೇ ಜನಾರ್ದನ ಸೇವೆ ಎಂದು ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿದ್ದು, ಉಪ್ಪಿನಂಗಡಿ ಪರಿಸರದ ಜನರಿಗೆ ಚಿರಪರಿಚಿತರಾಗಿದ್ದಾರೆ. ಇವರನ್ನು ಜೆಸಿಐ ನೆಕ್ಕಿಲಾಡಿ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಉಪ್ಪಿನಂಗಡಿಯ ಧನ್ವಂತರಿ ಕ್ಲಿನಿಕ್‍ನ ಸ್ಥಾಪಕರಾದ ಡಾ.ನಿರಂಜನ್ ರೈ 20 ವರ್ಷಗಳಿಂದ ಆಯುರ್ವೇದ ವೈದ್ಯರಾಗಿ ಜೊತೆಗೆ ಉಪ್ಪಿನಂಗಡಿಯ ಅನೇಕ ಸಂಘ ಸಂಸ್ಥೆಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡು ಸಮಾಜ ಸೇವಕರಾಗಿಯೂ ಸೇವೆ ಸಲ್ಲಿಸುತ್ತಿರುವ ಇವರನ್ನು ಸನ್ಮಾನಿಸಲಾಯಿತು.
ಉಪ್ಪಿನಂಗಡಿಯ ಖ್ಯಾತ ದಂತ ವೈದ್ಯರಾದ ಜೆಸಿಐ ಉಪ್ಪಿನಂಗಡಿಯ ಪೂರ್ವಾಧ್ಯಕ್ಷರು, ವಲಯ 15ರ ಪೂರ್ವ ವಲಯ ಉಪಾಧ್ಯಕ್ಷರು, ಉಪ್ಪಿನಂಗಡಿಯಲ್ಲಿ ಗಿರಿಜಾ ದಂತ ಕ್ಲಿನಿಕ್‍ನ್ನು ಪ್ರಾರಂಭಿಸಿ ಕಳೆದ 24 ವರ್ಷಗಳಿಂದ ದಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ರಾಜರಾಮ್ ಕೆ.ಬಿ ಇವರನ್ನು ಜೇಸಿಐ ನೆಕ್ಕಿಲಾಡಿ ಘಟಕದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ನೆಕ್ಕಿಲಾಡಿ ಘಟಕದ ಅಧ್ಯಕ್ಷರಾದ ವಿನೀತ್ ಶಗ್ರಿತ್ತಾಯ, ಕಾರ್ಯದರ್ಶಿಯಾದ ರಮೇಶ್ ಸುಭಾಷ್ ನಗರ ಹಾಗೂ ನಿಕಟ ಪೂರ್ವಾಧ್ಯಕ್ಷೆಯಾದ ಅಮಿತಾ ಹರೀಶ್ ಹಾಗೂ ಸದಸ್ಯರುಗಳು, ಕ್ಲಿನಿಕ್‍ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.