Wednesday, January 22, 2025
ಸುದ್ದಿ

ಬೆಂಗಳೂರಲ್ಲಿ ಮೂರೇ ಘಂಟೆಯಲ್ಲಿ ತಮ್ಮ ಕೈ ಚಳಕ ತೊರಿಸಿದ ದುಷ್ಕರ್ಮಿಗಳು – ಕಹಳೆ ನ್ಯೂಸ್

ಬೆಂಗಳೂರು: ಕೇವಲ ಮೂರು ಗಂಟೆಯಲ್ಲೇ ಬೆಂಗಳೂರಿನ 13 ಅಂಗಡಿಗಳಿಗೆ ಕನ್ನ ಹಾಕಿದ ಘಟನೆ ನಡೆದಿದ್ದು, ಈ ಘಟನೆ ಜನರಲ್ಲಿ ಆತಂಕ ಸೃಷ್ಟಿಸಿದೆ. ಬಸವನಗುಡಿಯ ಡಿವಿಜಿ ರಸ್ತೆ ಹಾಗೂ ಎನ್‍ಆರ್ ಕಾಲೊನಿಯಲ್ಲಿ ದುಷ್ಕರ್ಮಿಗಳು ಮೂರು ಗಂಟೆಯಲ್ಲೇ 13 ಅಂಗಡಿಗಳಿಗೆ ಕನ್ನ ಹಾಕಿದ್ದಾರೆ.

ಭಾನುವಾರ ತಡರಾತ್ರಿ ಮತ್ತು ಸೋಮವಾರ ಬೆಳಗ್ಗೆ ಎರಡು ಗಂಟೆಯಿಂದ ಐದು ಗಂಟೆಗಳ ನಡುವೆ ಇಬ್ಬರು ಯುವಕರು ಮಳಿಗೆಗಳ ಶೆಟರ್ ಮೀಟಿ ಕಳವು ಮಾಡಿದ್ದಾರೆ. ಲಕ್ಷಾಂತರ ಮೌಲ್ಯದ ವಸ್ತುಗಳು ಹಾಗೂ ಹಣ ಕಳವಾಗಿದೆ. ಈ ಪ್ರಕರಣದ ಕುರಿತು ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕದಿಯಲು ದರೋಡೆಕೊರ ಬೆಡ್‍ರೂಂನಲ್ಲೇ ಅಡಗಿ ಕುಳಿತಿದ್ದು, ಡಿವಿಜಿ ರಸ್ತೆ, ಚಿಲ್ಡ್ರ್ ನ್ ಚಾಯ್ಸ್, ಎಲೆಕ್ಟ್ರಿಕ್ ಶಾಪ್, ಪೂರ್ವ ಆಂಜನೇಯ ದೇವಸ್ಥಾನ ರಸ್ತೆಯ ಪುಳಿಯೊಗರೆ ಪಾಯಿಂಟ್, ಚಾಂಪಿಯನ್ ಬ್ಯೂಟಿ ಪಾರ್ಲರ್, ಜನನಿ ಪಾನ್ ಬಂಢಾರ, ದಿನಸಿ ಅಂಗಡಿ ಸೇರಿದಂತೆ 13 ಅಂಗಡಿಗಳಿಗೆ ಕನ್ನ ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು