Tuesday, January 21, 2025
ಸುದ್ದಿ

ಸಮಾಧಿಯಿಂದ ಜೀವವಾಗಿ ಬಂದ ಮೊಹ್ಮದ್ ಫರ್ಕಾನ್ – ಕಹಳೆ ನ್ಯೂಸ್

ಲಖನೌ (ಉತ್ತರಪ್ರದೇಶ): ಜೂನ್ ಇಪ್ಪತ್ತೊಂದರಂದು ಅಪಘಾತಕ್ಕೊಳಪಟ್ಟ ಇಪ್ಪತ್ತು ವರ್ಷದ ಯುವಕ ಮೊಹ್ಮದ್ ಫರ್ಕಾನ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಸೋಮವಾರದಂದು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು ಹಾಗೂ ಆಂಬುಲೆನ್ಸ್ ನಲ್ಲಿ ಮನೆಗೆ ಮೃತ ದೇಹವನ್ನು ತರಲಾಗಿತ್ತು.

ಸಮಾಧಿಗಾಗಿ ಹಳ್ಳ ತೋಡಿ ಇನ್ನೇನು ಆತನ ದೇಹವನ್ನು ಹೂಳಬೇಕಿತ್ತು. ಆಗ ದೇಹದಲ್ಲಿ ಕದಲಿಕೆ ಆದದ್ದನ್ನು ಕುಟುಂಬ ಸದಸ್ಯರು ಗಮನಿಸಿದರು. ಶೋಕಾಚರಣೆ ನಿಲ್ಲಿಸಲಾಯಿತು. ತಕ್ಷಣವೇ ಮೊಹ್ಮದ್ ಫರ್ಕಾನ್‍ನನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆತನಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲಾಯಿತು.
ಲಖನೌನ ಮುಖ್ಯ ವೈದ್ಯಕೀಯ ಅಧಿಕಾರಿ ನರೇಂದ್ರ ಅಗರ್ವಾಲ್ ಮಾತನಾಡಿ, ಈ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ಹೇಳಿದ್ದಾರೆ. “ರೋಗಿಯ ಸ್ಥಿತಿ ಗಂಭೀರವಾಗಿ ಇರುವುದು ಹೌದು. ಆದರೆ ಮೆದುಳು ನಿಷ್ಕ್ರಿಯ ಆಗಿಲ್ಲ. ನಾಡಿ ಮಿಡಿತ, ರಕ್ತದೊತ್ತಡ ಹಾಗೂ ಸ್ಪಂದನೆ ಚೆನ್ನಾಗಿದೆ. ಜೀವರಕ್ಷಕ ಸಲಕರಣೆ ಸಹಾಯದಲ್ಲಿ ಆತನನ್ನು ಇರಿಸಲಾಗಿದೆ” ಎಂದು ಫರ್ಕಾನ್ ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು