Tuesday, January 21, 2025
ಸುದ್ದಿ

ಕೊಡಗು ಜಿಲ್ಲಾ ಮಾದ್ಯಮ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸತೀಶ್ ಹೊದ್ದೆಟ್ಟಿ ಆಯ್ಕೆ – ಕಹಳೆ ನ್ಯೂಸ್

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇದರ ಕೊಡಗು ಜಿಲ್ಲಾ ಮಾದ್ಯಮ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸತೀಶ್ ಹೊದ್ದೆಟ್ಟಿ ಆಯ್ಕೆಯಾಗಿದ್ದಾರೆ.

ಜೂನ್ 30ರಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇದರ ರಾಜ್ಯಾಧ್ಯಕ್ಷ ಕೃಷ್ಣೇ ಗೌಡರ ಸಲಹೆಯಂತೆ ಕೊಡಗು ಜಿಲಾಧ್ಯಕ್ಷ ಉನೈಸ್ ಪೆರಾಜೆ ಯವರು ಅಧಿಕೃತವಾಗಿ ಜಾರಿ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸತೀಶ್, ಪೆರಾಜೆ ಗ್ರಾಮದವರಾಗಿದ್ದು 10 ವರ್ಷಗಳಿಂದ ಸುದ್ದಿ ಬಿಡುಗಡೆ ಪತ್ರಿಕೆ ಸುಳ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಕಹಳೆ ಚಾನೆಲ್‍ನ ಸುಳ್ಯ ವರದಿಗಾರರಾಗಿದ್ದಾರೆ, ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಜರ್ನಲಿಸ್ಟ್ ಯೂನಿಯನ್‍ನ ನಿರ್ದೇಶಕರಾಗಿದ್ದಾರೆ. ಇದೇ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಪಾಧ್ಯಕ್ಷರಾಗಿ ಶಿವ ಪ್ರಸಾದ್, ಸೂರಜ್ ಹೊಸೂರ್ ಹಾಗೂ ಕೊಡಗು ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಮನು ಪೆರುಮುಂಡರವರು ಹಾಗೂ ಸುಳ್ಯ ನಗರ ಅಧ್ಯಕ್ಷರಾಗಿ ರಶೀದ್ ಜಟ್ಟಿಪಳ್ಳರವರು ಹಾಗೂ ಪೆರಾಜೆ ವಲಯ ಕಾರ್ಯದರ್ಶಿಯಾಗಿ ವೆಂಕಟೇಶ್‍ರವರು ಹಾಗೂ ಪೆರಾಜೆ ವಲಯ ಯುವ ಘಟಕದ ಅಧ್ಯಕ್ಷರಾಗಿ ಸಚಿನ್‍ರವರು ಹಾಗೂ ಪೆರಾಜೆ ವಲಯ ಯುವ ಘಟಕದ ಪ್ರ.ಕಾರ್ಯದರ್ಶಿಯಾಗಿ ಬಾಸಿತ್ ಪೆರಾಜೆಯವರನ್ನು ಆಯ್ಕೆ ಮಾಡಲಾಯಿತು

ಜಾಹೀರಾತು
ಜಾಹೀರಾತು
ಜಾಹೀರಾತು