Tuesday, January 21, 2025
ಸುದ್ದಿ

ಮಹಾ ಮಳೆಗೆ ನಲುಗಿದ ಮಾಹಾನಗರಿ ಮುಂಬೈ.. – ಕಹಳೆ ನ್ಯೂಸ್

ಮುಂಬೈ: ಮುಂಬೈ ಜನತೆ ಮಹಾ ಮಳೆಗೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಎಲ್ಲೂ ಕಾಲಿಡುವಂತಿಲ್ಲ, ಆರೋಗ್ಯ ಸರಿ ಇಲ್ಲವೆಂದರೂ ಆಸ್ಪತ್ರೆ ಹೋಗುವುದು ಕೂಡ ಕಷ್ಟ.

ಜಾಹೀರಾತು
ಜಾಹೀರಾತು
ಜಾಹೀರಾತು

ರಸ್ತೆಗಳೆಲ್ಲವೂ ನದಿಯಂತೆ ಗೋಚರಿಸುತ್ತಿವೆ. ರೈಲು ಸಂಚಾರ, ವಿಮಾನ ಹಾರಾಟ, ಬಸ್‍ಗಳ ಓಡಾಟ ಎಲ್ಲವೂ ಸ್ಥಗಿತಗೊಂಡಿದೆ. ಹಲವು ಮನೆಗಳು ಕುಸಿಯುವ ಹಂತದಲ್ಲಿದೆ. ಮನೆಗಳಿಗೆ ನೀರು ನುಗ್ಗಿದೆ. ಕೆಲವೆಡೆ ಅರ್ಧ ಮನೆಗಳು ಮುಳುಗಿಯೇ ಹೋಗಿವೆ. ಎಲ್ಲಿ ನೋಡಿದರಲ್ಲಿ ಮಳೆ ನೀರೇ ಹರಿಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂಬೈನಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಮಳೆಗೆ ಕಳೆದ 24 ಗಂಟೆಗಳಲ್ಲಿ 20ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇನ್ನೂ ಕೆಲವರನ್ನು ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಗಿದೆ.

ಸರ್ಕಾರಿ, ಖಾಸಗಿ ಕಚೇರಿಗಳು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಮಲಾಡ್ ಪ್ರದೇಶದಲ್ಲಿ ಕಾಂಪೌಂಡ್ ಕುಸಿದು 18 ಮಂದಿ ಮೃತಪಟ್ಟಿದ್ದು, 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮುಂಬೈನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ 55 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆ ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ. ಹಾಗೆಯೇ 52 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಮುಂಬೈ ಏರ್‍ಪೋರ್ಟ್‍ನಲ್ಲಿ ಟಿಕೆಟ್ ಬುಕಿಂಗ್ ಕೂಡ ಸ್ಥಗಿತಗೊಳಿಸಲಾಗಿದೆ.