ಕನ್ನಡ ಚಿತ್ರರಂಗದ ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಬಂದು ಸೆಲೆಬ್ರೆಟಿಗೆ ಚಾಲೆಂಜ್ ಮಾಡಲಿದ್ದೇನೆ ಎಂದು ಹೇಳಿದ್ದರು. ಇದು ಎಲ್ಲರ ಕಿವಿ ನೆಟ್ಟಗಾಗಿಸಿತ್ತು. ಎಲ್ಲರೂ ಕುತೂಹಲದಿಂದ ಕಾಯುತಿದ್ದರು.
ಅದರಂತೆ ದರ್ಶನ್ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಬಂದು ನನ್ನನ್ನು ನೀವು ಸೆಲೆಬ್ರೆಟಿ ಎಂದು ಕರೆಯುತ್ತೀರಿ, ಆದರೆ ನನಗೆ ಸೆಲೆಬ್ರೆಟಿ ಅಂದ್ರೆ, ನನ್ನ ಅಭಿಮಾನಿಗಳು. ಹಾಗಾಗಿ, ಇನ್ನೇನು ‘ಮುನಿರತ್ನ ಕುರುಕ್ಷೇತ್ರ’ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಬಿಡುಗಡೆಯ ಸಂದರ್ಭದಲ್ಲಿ ನೀವು ಹೇಗೆ ನನಗೆ ಮರ್ಯಾದೆಯನ್ನು ಕೊಡಿತ್ತೀರೋ, ಅದೇ ರೀತಿಯ ಮರ್ಯಾದೆ ಗೌರವವನ್ನು ‘ಮುನಿರತ್ನ ಕುರುಕ್ಷೇತ್ರ’ ನಟಿಸಿರುವ ಇತರೇ ಕಲಾವಿದರಾದ ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ಶ್ರೀನಿವಾಸ ಮೂರ್ತಿ, ಸೋನುಸೂದ್ ಹಾಗೂ ಮತ್ತಿತರರಿಗೂ ಕೊಡಿ ಎಂದು ವಿನಂತಿಸಿಕೊಂಡಿದ್ದಾರೆ.
ಈ ಬೆಳವಣಿಗೆಯನ್ನು ನೋಡುತ್ತಾ ಇದ್ದರೆ ಕುರುಕ್ಷೇತ್ರ ಸಿನೆಮಾ, ಈ ಹಿಂದೆ ಭಾರೀ ನಿರೀಕ್ಷೆಯಿಂದ ತೆರೆಕಂಡಿದ್ದ ದಿ ವಿಲನ್, ಡಿಸಾಸ್ಟರ್ ಆಗಿದ್ದಲ್ಲದೇ ಅಭಿಮಾನಿಗಳ ನಡುವೆ ಕಲಹ ಮತ್ತು ನಿರ್ದೇಶಕನಿಗೆ ಬಾಯಿಗೆ ಬಂದಂತೆ ಮಂಗಳಾರತಿ ಮಾಡಿದ್ದರು.
ದಿ ವಿಲನ್‍ಗೂ, ಕುರುಕ್ಷೇತ್ರಕ್ಕೂ ಇರುವ ಸಾಮ್ಯತೆ ಏನೆಂದರೆ, ಅತೀ ನಿರೀಕ್ಷೆ ಹುಟ್ಟಿಸಿ ಕಳಪೆ ಚಿತ್ರ ನೀಡುವುದು. ಅಂದ್ರೆ ಈಗಾಗಲೇ ರಿಲೀಸ್ ಆಗಿರುವ ಕುರುಕ್ಷೇತ್ರದ ಟೀಸರ್ ಮತ್ತು ಟ್ರೈಲರ್‍ಗಳನ್ನು ನೋಡುತ್ತಿದ್ದರೆ ಚಿತ್ರ ಎಷ್ಟು ಕಳಪೆಯಾಗಿ ಮೂಡಿಬಂದಿದೆ ಎಂದು ಸಾಮಾನ್ಯ ಸಿನಿ ಪ್ರೇಕ್ಷಕರಿಗೂ ತಿಳಿಯುತ್ತದೆ.
ಒಟ್ಟಿನಲ್ಲಿ ದರ್ಶನ್ ಚಿತ್ರ ಬದುಕಿನ 50ನೇ ಸಿನೆಮಾ ಎಂಬ ಟ್ಯಾಗ್ ಹಾಕಿಸಿಕೊಂಡು ಬರುತ್ತಿರುವ ಕುರುಕ್ಷೇತ್ರ ಹಿಟ್ ಆಗುತ್ತಾ ಅನ್ನೋದಕ್ಕೆ ಸಿನಿಮಾ ಚಿತ್ರ ಮಂದಿರಕ್ಕೆ ಬರಬೇಕಷ್ಟೆ.