Tuesday, January 21, 2025
ಸುದ್ದಿ

ಅರಬರ ನಾಡಿನಿಂದ ‘ಕೊಡಗಿಗೆ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆ’ ಅಭಿಯಾನಕ್ಕೆ ಬೆಂಬಲ – ಕಹಳೆ ನ್ಯೂಸ್

ದುಬೈಯಲ್ಲಿ ನಡೆದ ವೈದ್ಯರ ದಿನದಲ್ಲಿ ಅನಿವಾಸಿ ಕನ್ನಡ ವೈದ್ಯರುಗಳಿಂದ ಈಗ ನಡೆಯುತ್ತಿರುವ ಕೊಡಗಿಗೆ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆ ಅಭಿಯಾನಕ್ಕೆ ಅರಬರ ನಾಡು ದುಬೈನಿಂದ ಬೆಂಬಲ ಸೂಚಿಸಿದರು. ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕುಟುಂಬ ಜೂನ್ 28ರಂದು ಶೇಕ್ ಜಾಯೆದ್ ರಸ್ತೆಯಲ್ಲಿರುವ ಕೊನ್ರಾಡ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಕನ್ನಡ ಡಾಕ್ಟರ್ಸ್ ಡೇ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಕೊಡಗಿನ ಪರ ಧ್ವನಿ ಎತ್ತಿದರು.

ಆಯೋಜಕರಲ್ಲಿ ಒಬ್ಬರಾದ ರಫೀಕಲಿ ಕುಂಡಂಡ ಕುಂಜಿಲ ಅವರು ಮಾತನಾಡಿ ಕಳೆದ ಹಲವು ವರ್ಷಗಳಲ್ಲಿ ಸುಸಜ್ಜಿತ ಆಸ್ಪತ್ರೆ ಕೊಡಗಿನಲ್ಲಿ ಇಲ್ಲದ ಕಾರಣ ಮಂಗಳೂರು ಮೈಸೂರಿಗೆ ತಲುಪುವ ಮದ್ಯೆದಲ್ಲಿ ಹಲವು ಜೀವಗಳು ಬಲಿಯಾಗಿದೆ, ಡಾಕ್ಟರಸ್ ಅಸೋಸಿಯೇಷನ್ ಡಾ. ಲೇಖಾ ಮಾತನಾಡಿ ಮಳೆಗಾಲದಲ್ಲಿ ಹೆಚ್ಚಿನ ಅನಾಹುತ ಮತ್ತು ಆಸ್ಪತ್ರೆಯ ಅವಶ್ಯಕತೆ ತಿಳಿಸಿದರು. ಹಾಗೂ ಡಾಕ್ಟರ್ಸ್ ಅಸೋಸಿಯೇಷನ್ ಮುಖ್ಯಸ್ಥ ಡಾ.ಮಾಧವ ರಾವ್ ಮಾತನಾಡಿ ಡಾಕ್ಟರ್ಸ್ ಅಸೋಸಿಯೇಷನ್ 100ಕ್ಕಿಂತಲೂ ಹೆಚ್ಚಿನ ವೈದ್ಯರು ಬೆಂಬಲ ಸೂಚಿಸಲು ಕೈ ಮೇಲೆತ್ತಿ ಕೊಡಗಿಗೆ ಮಲ್ಟಿ ಸ್ಪೆಸಿಯಾಲಿಟಿ ಆಸ್ಪತ್ರೆ ಕೂಗನ್ನು ಕಡಲಾಚೆಯಿಂದ ರಾಜ್ಯ ಸರ್ಕಾರಕ್ಕೆ ಧ್ವನಿ ತಲುಪಿಸಲು ಕರೆ ಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಡಾ.ಹಾರಿಸ್ ಮಾತನಾಡಿ ದುಬೈ ಕನ್ನಡ ವೈದ್ಯರ ಸಂಘದಿಂದ ಕೊಡಗಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸಲು ಸಲಹೆ ಕೊಟ್ಟರು. ಹೆಮ್ಮೆಯ ದುಬೈ ಕನ್ನಡಿಗರು ಕುಟುಂಬ ಸದಸ್ಯರಾದ ಡಾ.ಸವಿತಾ ಮೋಹನ್, ಸುದೀಪ್ ದಾವಣಗೆರೆ, ಸೆಂತಿಲ್ ಬೆಂಗಳೂರು, ಮಮತಾ ಶಾರ್ಜಾ, ಪಲ್ಲವಿ ಬಸವರಾಜ್, ಶಶಿಧರ್, ವಿಷ್ಣುಮೂರ್ತಿ ಮೈಸೂರು, ಹಾದಿಯ ಮಂಡ್ಯ ಹಾಜರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು