ಬೆಂಗಳೂರು: ಪ್ಲಾಸ್ಟಿಕ್ ಬಳಕೆ ನೀಷೇಧದ ಕುರಿತು ಬಿಬಿಎಂಪಿ ಎಷ್ಟೇ ಮನವಿ ಮಾಡಿಕೊಂಡರೂ ಪ್ರತಿ ಅಂಗಡಿಗಳಿಗೆ ಹೋಗಿ ಪ್ಲಾಸ್ಟಿಕ್ ಕವರ್ ಬಳಕೆ ಮಾಡಬೇಡಿ, ಬಟ್ಟೆ ಚೀಲಗಳನ್ನು ಬಳಸಿ, ಅಥವಾ ಗ್ರಾಹಕರಿಗೆ ನೀವು ಬ್ಯಾಗ್‍ಗಳನ್ನು ತರದೇ ಇದ್ದರೇ ತರಕಾರಿ ಕೊಡುವುದೇ ಇಲ್ಲ ಎಂದು ಹೇಳಿ ಎಂದೆಲ್ಲಾ ಹೇಳಿ ಪ್ರಯತ್ನ ಪಟ್ಟರೂ ಕದ್ದುಮುಚ್ಚಿ ಪ್ಲಾಸ್ಟಿಕ್ ಕವರ್ ಮಾರಾಟ ನಡೆಯುತ್ತಲೇ ಇದೆ.
ಇಷ್ಟು ದಿನ ಪ್ಲಾಸ್ಟಿಕ್ ಉತ್ಪಾದಕರು, ಸಗಟುಮಾರಾಟಗಾರರು ಮತ್ತು ಸಾಮಾನು ಸರಂಜಾಮುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿಕೊಡುತ್ತಿದ್ದ ಹೋಟೆಲ್, ಮಾಲ್, ಅಂಗಡಿಗಳ ಮೇಲಷ್ಟೇ ದಾಳಿ ನಡೆಸಿ ದಂಡ ವಿಧಿಸುತ್ತಿದ್ದರು. ಆದರೆ ಇದೀಗ ಪ್ಲಾಸ್ಟಿಕ್ ಕವರ್ ಹಿಡಿದುಕೊಂಡವರ ಮೇಲೂ ದಂಡ ವಿಧಿಸಲು ಮುಂದಾಗಿದೆ.
ಬಿಬಿಎಂಪಿ ಅಧಿಕಾರಿಗಳ ಕಣ್ಣಿಗೆ ಬಿದ್ದರೆ ಸ್ಥಳದಲ್ಲೇ 500 ರೂ ದಂಡ ಕಟ್ಟಬೇಕಾಗುತ್ತದೆ. ಹಾಗಾಗಿ ಆದಷ್ಟು ಪ್ಲಾಸ್ಟಿಕ್ ಕವರ್ ಗಳಿಂದ ದೂರವಿರಿ. ಜುಲೈ 11 ರಿಂದ ಜಾರಿಗೆ ಬರುವಂತೆ ಪ್ಲಾಸ್ಟಿಕ್ ಅನ್ನು ನಿಷೇಧಿಸಿದೆ.