Wednesday, January 22, 2025
ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಹರಿದಿದ್ದ ಸುಳ್ಳು ಸುದ್ದಿ; ಪೊಲೀಸ್ ಮೆಟ್ಟಿಲೇರಿದ ಪ್ರಕರಣ – ಕಹಳೆ ನ್ಯೂಸ್

ಪುಂಜಾಲಕಟ್ಟೆ: ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪೀಸ್ ಫಯ್ಯಾ ಎಂಬ ಯುವಕನ ಬಗ್ಗೆ ಕೆಟ್ಟ ಸುದ್ದಿ ಹರಿದಾಡುತ್ತಿತ್ತು. ಪೇಸ್‍ಬುಕ್ ಪೇಜ್‍ನ ಸ್ಕ್ರೀನ್‍ಶಾಟ್ ತೆಗೆದು ಈತನೊಬ್ಬ ಜಿಹಾದಿ ಕಾಮುಕ, ಎಂಬ ತಲೆಬರಹದ ಅಡಿಯಲ್ಲಿ ಸಖತ್ ಶೇರ್ ಆಗಿತ್ತು.

ಹಾಗೆಯೇ ಈತ ಮಡಂತ್ಯಾರಿನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ಪೀಸ್ ಫಯ್ಯಾ ಎಂಬ ಜಿಹಾದಿ ಯುವಕ, ಸುಂದರ ಹಿಂದೂ ಯುವತಿಯರನ್ನು ಗೆಳೆತನ ಮಾಡಿಕೊಂಡು, ಫ್ರೀಯಾಗಿ ಬಟ್ಟೆಗಳನ್ನು ಕೊಡುತ್ತೇನೆ ಎಂದು ಪುಸಲಾಯಿಸಿ ತಮ್ಮ ಜಿಹಾದ್ ಬಲೆಗೆ ಬೀಳಿಸಲು ಪ್ರಯತ್ನ ಮಾಡುತ್ತಿದ್ದಾನೆ. ಈ ಕಾಮುಕನಿಗೆ ತಕ್ಕ ಪಾಠ ಕಲಿಸಬೇಕು ಎಂಬ ವಿಚಾರವಾಗಿ ಸಂದೇಶ ಎಲ್ಲೆಡೆ ವೈರಲ್ ಆಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪೀಸ್ ಫಯ್ಯಾ ಪ್ರಕರಣ ದಾಖಲಿಸಿದ್ದು, ಈ ಸಂದೇಶವನ್ನು ಸೃಷ್ಟಿಸಿದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಕಿಡಿಗೇಡಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೇಸು ದಾಖಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು