Wednesday, January 22, 2025
ಸುದ್ದಿ

ಗೋವು ರಕ್ಷಿಸಿ ದೇಶ ಉಳಿಸಿ; ಸುಳ್ಯದಲ್ಲಿ ಗೋಸಾಗಾಟದ ವಿರುದ್ಧ ಪ್ರತಿಭಟನೆ – ಕಹಳೆ ನ್ಯೂಸ್

ಸುಳ್ಯ: ಅಕ್ರಮ ಗೋಸಾಗಾಟದ ವಿರುದ್ಧ ಜಿಲ್ಲೆಯ ನಾನಾ ಕಡೆ ಪ್ರತಿಭಟನೆ ನಡೆಯುತ್ತಿದ್ದು ಸುಳ್ಯದಲ್ಲೂ ಪ್ರತಿಭಟನೆ ನಡೆಯಿತು. ಅಕ್ರಮ ಗೋಸಾಗಾಟ ವಿರುದ್ದ ಸುಳ್ಯ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ಆರಂಭವಾಗಿದೆ. ಬಿ ಜೆ ಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಹರೀಶ್ ಬೂಡುಪನ್ನೆ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ದರಣಿ ಆರಂಭಿಸಿದ್ದಾರೆ. ಗೋವು ರಕ್ಷಿಸಿ ದೇಶ ಉಳಿಸಿ, ಗೋವು ಆಹಾರದ ವಸ್ತುವಲ್ಲ, ಅಕ್ರಮ ಖಸಾಯಿಕಾನೆ ನಿಲ್ಲಿಸಿ ಎಂಬ ಘೋಷಣೆ ಕೇಳಿಬಂದವು. ಪ್ರತಿಭಟನೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು