Wednesday, January 22, 2025
ಸುದ್ದಿ

ಮರದಕೊಂಬೆ ವಿದ್ಯುತ್ ತಂತಿ ಮೇಲೆ ಬಿದ್ದು ಬೈಕ್ ಸವಾರರಿಗೆ ಗಾಯ – ಕಹಳೆ ನ್ಯೂಸ್

ತೆಂಕಎಡಪದವು: ಮರದ ಕೊಂಬೆಯೊಂದು ವಿದ್ಯುತ್ ತಂತಿಗೆ ಬಿದ್ದು ನಂತರ ಇಬ್ಬರು ಲೈನ್ ಮ್ಯಾನ್‍ಗಳ ಮೇಲೆ ಬಿದ್ದ ಘಟನೆ ನಡೆದಿದೆ. ತೆಂಕ ಎಡಪದವು ಗ್ರಾಮದ ಪಂಚಾಯತ್‍ನ ಹಿಂಬದಿಯ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೈಕ್‍ನಲ್ಲಿ ಸಂಚಾರ ಮಾಡುತ್ತಿದ್ದ ವೇಳೆ ಮರದ ಕೊಂಬೆ ಬಿದ್ದಿದೆ. ಇದರಿಂದಾಗಿ ಇಬ್ಬರಿಗೂ ಗಂಭೀರ ಗಾಯಗಳಾಗಿದೆ.
ಗಾಯಗೊಂಡ ಇಬ್ಬರು ಲೈನ್ ಮ್ಯಾನ್‍ಗಳನ್ನು ಬಾಗಲಕೋಟೆಯ ದರಿಯಪ್ಪ, ಹಾಗೂ ಕರಿಯಪ್ಪ ಎಂದು ಗುರುತಿಸಲಾಗಿದೆ. ಘಟನೆ ನಡೆದ ಕೂಡಲೇ ಸ್ಪಂದಿಸಿದ ಸ್ಥಳೀಯ ಎಡಪದವಿನ ನಿವಾಸಿಗಳು ‘ಶ್ರೀ ರಾಮ ರಕ್ಷಾ’ ಎಂಬ ಅಂಬುಲೆನ್ಸ್ ಮೂಲಕ ಅಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಗಾಯಗೊಂಡ ಲೈನ್‍ಮ್ಯಾನ್‍ಗಳು ಎಜೆ ಹಾಸ್ಪಿಟಲ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು