Wednesday, January 22, 2025
ಸುದ್ದಿ

ಕುದ್ಲೂರಿನಲ್ಲಿ ನಡೆದ ಶಾಹ್ ಉಸ್ತಾದ್ ಅನುಸ್ಮರಣೆ – ಕಹಳೆ ನ್ಯೂಸ್

ಕುದ್ಲೂರು ; ಮುಬಾರಕ್ ಜುಮ್ಮಾ ಮಸೀದಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಶಾಖೆ ವತಿಯಿಂದ ಕುದ್ಲೂರಿನಲ್ಲಿ ಶಾಹ್ ಉಸ್ತಾದ್ ಅನುಸ್ಮರಣೆ ಜೂನ್ 30ರಂದು ನಡೆಯಿತು. ಮುಬಾರಕ್ ಜುಮಾ ಮಸೀದಿ ಕುದ್ಲೂರು ಹಾಗೂ ಎಸ್.ಕೆ.ಎಸ್.ಎಸ್.ಎಫ್ ಕುದ್ಲೂರು ಶಾಖೆ ಇದರ ಜಂಟಿ ಆಶ್ರಯದಲ್ಲಿ ಮಸೀದಿಯ ಸ್ಥಾಪಿತ ಕಾಲದಿಂದ ಅಂತ್ಯಶ್ವಾಸದವರೆಗೆ ಗೌರವಾಧ್ಯಕ್ಷರಾಗಿದ್ದ ಉಸ್ತಾದ್ ಡಾ|| ಶಾಹ್ ಮುಸ್ಲಿಯಾರ್ ಅನುಸ್ಮರಣಾ ಸಂಗಮ ಜಮಾಅತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಮರ್ವೇಲು ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆತೂರು ಮುದರ್ರಿಸ್ ಸಯ್ಯಿದ್ ಜುನೈದ್ ಜಿಫ್ರಿ ತಂಙಳ್ ಸಭೆಯನ್ನು ಉದ್ಘಾಟಿಸಿ ಉಸ್ತಾದರ ಜೀವನ ಶೈಲಿ ಜನರನ್ನು ಒಳಿತಿನೆಡೆಗೆ ಹಾಗೂ ಮರಣ ಸ್ಮರಣೆಗೆ ಸೆಳೆಯುತ್ತಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಭಾಷಣ ಮಾಡಿದ ಕುಂತೂರು ಬೇಳ್ಪಾಡಿ ಎ & ಬಿ ಜುಮಾ ಮಸೀದಿ ಖತೀಬ್ ಮಜೀದ್ ದಾರಿಮಿ ಇಬಾದತ್ ಯಾವ ರೀತಿಯಾಗಬೇಕೆಂದು ಸ್ಮರಣೆಗೆ ಹೇತುವಾಗಲು ಏನೆಲ್ಲಾ ಮಾಡಬೇಕೆಂದು ತನ್ನ ಜೀವನ ಶೈಲಿಯಿಂದ ಉಸ್ತಾದ್ ತೋರಿಸಿಕೊಟ್ಟಿದ್ದರೆಂದು ಅಭಿಪ್ರಾಯಪಟ್ಟರು. ತದನಂತರ ಮಾಜಿ ಖತೀಬ್ ನಿಯಾಝ್ ಫೈಝಿ ಸಂಗಮಕ್ಕೆ ಪ್ರಶಂಸೆಯರ್ಪಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮದರಸ ಅಧ್ಯಾಪಕರಾದ ಮುಹಮ್ಮದ್ ಮುಸ್ಲಿಯಾರ್ ಕೋಲ್ಪೆ ಸಹಿತ ಹಲವು ಉಲಮಾಗಳು ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕೆ.ವೈ ಕೋಶಾಧಿಕಾರಿ ಅಬ್ದುಲ್ ಖಾದರ್ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಅಶ್ರಫ್ ಕೊರೆಪದವು ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಕೋಶಾಧಿಕಾರಿ ನಝೀರ್ ಮೌಲವಿ ಮುಂತಾದ ಊರ ಗಣ್ಯರು ಉಪಸ್ಥಿತರಿದ್ದರು. ಗೌರವಾನ್ವಿತ ಜುನೈದ್ ಜಿಫ್ರಿ ತಂಙಳ್ ಆತೂರು ನೇತೃತ್ವದಲ್ಲಿ ಧಿಕ್ರ್ ದುಆ ಮಜ್ಲಿಸ್ ನಡೆಯಿತು. ಸಂಗಮದಲ್ಲಿ ಸ್ಥಳೀಯ ಖತೀಬ್ ಅಶ್ರಫ್ ರಹ್ಮಾನಿ ಸ್ವಾಗತಿಸಿ ವಂದಿಸಿದರು.