Wednesday, January 22, 2025
ಸುದ್ದಿ

ಕಾರ್ಯನಿರತ ವೈದ್ಯೆಯ ಮೇಲೆ ಜಿಲ್ಲಾ ಪಂಚಾಯತ್ ಅಧ್ಯಕೆಯ ದರ್ಪ; ಪೊಲೀಸ್ ಠಾಣೆಯಲ್ಲಿ ದೂರು ದಾಖಲು – ಕಹಳೆ ನ್ಯೂಸ್

ಪುತ್ತೂರು: ಕೆಲ ದಿನಗಳ ಹಿಂದೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆ ಅರ್ಚನಾ ರೋಗಿಗಳನ್ನು ತಪಾಸಣೆ ನಡೆಸುತ್ತಿದ್ದಾಗ ಜಿಲ್ಲಾ ಪಂಚಾಯತ್ ಅದ್ಯಕ್ಷೆ ಮೀನಾಕ್ಷಿ ಶಾಂತಿಗೋಡು ವೈದ್ಯೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವೈದ್ಯೆಯ ಜೊತೆ ಭಯ ಹುಟ್ಟಿಸುವ ರೀತಿಯಲ್ಲಿ ಬೈಯ್ಯಲು ಪ್ರಾರಂಭಿಸಿದಲ್ಲದೆ, ಆಸ್ಪತ್ರೆಯಲ್ಲಿ ಹಲ್ಲೆಗೊಳಗಾಗಿ ದಾಖಲಾದ ಮಗುವಿನ ಬಗ್ಗೆ ವಿಚಾರಿಸಿರುತ್ತಾರೆ.

ಆದರೆ ವೈದ್ಯಕೀಯ ನಿಯಮಾವಳಿ ಪ್ರಕಾರ ಯಾವುದೇ ಮಾಹಿತಿಯನ್ನು ನೀಡಲು ಅವಕಾಶವಿಲ್ಲದುದರಿಂದ ಮಾಹಿತಿ ನೀಡದಿದ್ದು ಇದೇ ಕಾರಣವಾಗಿ ಜಿಲ್ಲಾ ಪಂಚಾಯತ್ ಅದ್ಯಕ್ಷೆರವರು ವೈದ್ಯೆಗೆ ಹೀನಾಯವಾಗಿ ಬೈದು ರೋಗಿಗಳ ತಪಾಸಣೆಯ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಹಾಗು ತಾವು ಬೈಯುತ್ತಿರುವುದನ್ನು ಬೆಂಬಲಿಗರಿಂದ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಪಿರ್ಯಾದಿರವರ ಮನಸ್ಸಿಗೆ ಘಾಸಿ ಮಾಡಿದ್ದಲ್ಲದೆ ಮಾನಹಾನಿಯನ್ನುಂಟು ಮಾಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಪುತ್ತೂರು ಮಹಿಳಾ ಠಾಣೆಯಲ್ಲಿ ವೈದ್ಯೆ ದೂರನ್ನು ದಾಖಲಿಸಿದ್ದು, ಕಾಲಂ A:4  The Karnataka Phohibition of Violence against Medicare service personnel and Damage to Property in Medicare Service Institutions Act 2009 ಯಂತೆ ಪ್ರಕರಣ ದಾಖಲಾಗಿರುತ್ತದೆ

ಜಾಹೀರಾತು
ಜಾಹೀರಾತು
ಜಾಹೀರಾತು