Tuesday, January 21, 2025
ಸುದ್ದಿ

ನಾಲ್ಕನೇ ಶನಿವಾರ ಕೋರ್ಟ್‌ಗೆ ರಜೆ ನೀಡಲು ನಿರ್ಣಯ – ಕಹಳೆ ನ್ಯೂಸ್

ಬೆಂಗಳೂರು: ಇನ್ನುಮುಂದೆ ರಾಜ್ಯ ಹೈಕೋರ್ಟ್‌ ಹಾಗೂ ರಾಜ್ಯದ ಎಲ್ಲ ಅಧೀನ ನ್ಯಾಯಾಲಯಗಳ ಸಿಬ್ಬಂದಿಗೂ ನಾಲ್ಕನೇ ಶನಿವಾರದ ರಜೆ ಸಿಗಲಿದೆ. ಈ ಕುರಿತು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ವಿ.ಶ್ರೀಶಾನಂದ್‌ ಅವರು ಮಂಗಳವಾರ ಅಧಿಸೂಚನೆ ಹೊರಡಿಸಿದ್ದಾರೆ.

ನಾಲ್ಕನೇ ಶನಿವಾರದ ರಜೆ ಈ ತಿಂಗಳಿಂದಲೇ ಎಲ್ಲ ನ್ಯಾಯಾಲಯಗಳಿಗೂ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಸರ್ಕಾರ ರಜೆ ಘೋಷಿಸಿದ ನಂತರ ಹೈಕೋರ್ಟ್‌ ಅಧಿಕೃತವಾಗಿ ನಿರ್ಣಯ ಕೈಗೊಳ್ಳಬೇಕಿತ್ತು. ಹೀಗಾಗಿ ಜೂ.22ರ 4ನೇ ಶನಿವಾರ ರಜೆ ಘೋಷಿಸಿರಲಿಲ್ಲ. ಜೂ.26ರಂದು ಹೈಕೋರ್ಟ್‌ನ ಪೂರ್ಣ ಪೀಠ ಎಲ್ಲ ನ್ಯಾಯಾಲಯಗಳ ಸಿಬ್ಬಂದಿಗೂ ನಾಲ್ಕನೇ ಶನಿವಾರದ ರಜೆ ನೀಡಲು ನಿರ್ಣಯಿಸಿತ್ತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು