Tuesday, January 21, 2025
ಸಿನಿಮಾ

ಮತ್ತೊಂದು ಐತಿಹಾಸಿಕ ಪಾತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ಅನುಷ್ಕಾ ಶೆಟ್ಟಿ – ಕಹಳೆ ನ್ಯೂಸ್

ಚಿರಂಜೀವಿ ಮುಖ್ಯಭೂಮಿಕೆಯಲ್ಲಿರುವ ಸೈರಾ ಸಿನಿಮಾದಲ್ಲಿ ನಟಿ ಅನುಷ್ಕಾ ಶೆಟ್ಟಿ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅವರ ಪಾತ್ರದ ಬಗ್ಗೆ ಇದುವರೆಗೂ ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಅನುಷ್ಕಾ ಪಾತ್ರ ಬಹಿರಂಗವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ ‘ಸೈರಾ ನರಸಿಂಹ ರೆಡ್ಡಿ’ ಸ್ವಾತಂತ್ರ್ಯ ಯೋಧ ಉಯ್ಯಾಲವಾಡ ನರಸಿಂಹರೆಡ್ಡಿ ಜೀವನ ಕಥೆಯಾಧಾರಿತ ಸಿನಿಮಾದಲ್ಲಿ, ಟಾಲಿವುಡ್ ಲೇಡಿ ಸೂಪರ್ ಸ್ಟಾರ್ ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಸೈರಾ ನರಸಿಂಹ ರೆಡ್ಡಿ’ಯಲ್ಲಿ ಅನುಷ್ಕಾ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಪಾತ್ರದಲ್ಲಿ ಕಾಣಿಸಲಿದ್ದಾರೆ ಎಂದಿವೆ ಮೂಲಗಳು. ಈಗಾಗಲೆ ಶೂಟಿಂಗ್ ಮುಗಿದಿದ್ದು ಸೈರಾ ಸಿನಿಮಾ ಅಕ್ಟೋಬರ್ 2ರಂದು ತೆರೆಕಾಣಲಿದೆ.

ಚಿರಂಜೀವಿಗೆ ಜೋಡಿಯಾಗಿ ನಯನತಾರಾ ಅಭಿನಯಿಸಿದ್ದು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನೆಗಟೀವ್ ಶೇಡ್ಸ್ ವುಳ್ಳ ಪಾತ್ರದಲ್ಲಿ ಕಾಣಿಸಲಿದ್ದಾರೆ ಎನ್ನಲಾಗಿದೆ. ಬಾಲಿವುಡ್ ಮೆಗಾ ಸ್ಟಾರ್ ಅಮಿತಾಭ್ ಬಚ್ಚನ್ ಅತಿಥಿ ಪಾತ್ರದಲ್ಲಿ ನಟಿಸಿದ್ದು ಪಾತ್ರವರ್ಗದಲ್ಲಿ ಸುದೀಪ್, ಜಗಪತಿ ಬಾಬು, ವಿಜಯ್ ಸೇತುಪತಿ ಮುಂತಾದವರಿದ್ದಾರೆ.