ಬೆಂಗಳೂರಿನ ಸಿಸ್ಕೋ ಸಂಭ್ರಮ ತಂಡ ಹಾಗೂ ಯೂಥ್ ಫಾರ್ ಸೇವಾ ಬೆಂಗಳೂರು ತಂಡದ ಭಾಸ್ಕರ್, ಮಂಜುಶಂಕರ್, ರಘುನಂದನ್ ಸೇರಿದಂತೆ 20 ಕಾರ್ಯಕರ್ತರು ಸರಸ್ವತೀ ವಿದ್ಯಾಲಯ ಕಡಬದ ಪ್ರೌಢ ಹಾಗೂ ಪದವಿಪೂರ್ವ ವಿಭಾಗಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ರಚನಾತ್ಮಕ ತರಗತಿಗಳನ್ನು ಆಯೋಜಿಸಿದರು.
ಸಂಸ್ಥೆಯ ಪ್ರಯೋಗಾಲಯ ಕೊಠಡಿ, ಉಪಕರಣಗಳು, ಕಲಿಕೋಪಕರಣಗಳು, ಗ್ರಂಥಾಲಯಕ್ಕೆ ಸುಮಾರು ರೂ. 60,000 ಮೌಲ್ಯದ ಉಪಯುಕ್ತ ಪುಸ್ತಕಗಳನ್ನು ನೀಡಿ ಸಂಸ್ಥೆಯ ಜೊತೆ ಕೈ ಜೋಡಿಸಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ರವಿರಾಜ್ ಶೆಟ್ಟಿ ಕಡಬ, ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ, ಕೋಶಾಧಿಕಾರಿ ಲಿಂಗಪ್ಪ ಜೆ, ನಿರ್ದೇಶಕ ಶಿವಪ್ರಸಾದ್ ಮೈಲೇರಿ, ಶ್ರೀಮತಿ ಪುಲಾಸ್ತ್ಯ ರೈ, ಸೀತರಾಮ ಗೌಡ, ಪದವಿಪೂರ್ವ ವಿಭಾಗದ ಪ್ರಾಂಶುಪಾಲ ಮಹೇಶ್ ನಿಟಿಲಾಪುರ, ಪ್ರೌಢವಿಭಾಗದ ಮುಖ್ಯಸ್ಥರಾದ ಶೈಲಶ್ರೀ ರೈ ಉಪಸ್ಥಿತರಿದ್ದರು.