Tuesday, January 21, 2025
ಸುದ್ದಿ

ವಿಜಯ್ ಜೊತೆಗೂಡಿ ‘ಬಿಗಿಲ್’ ಊದಲಿದ್ದಾರ ಬಾಲಿವುಡ್ ಕಿಂಗ್ ಖಾನ್! – ಕಹಳೆ ನ್ಯೂಸ್

ವಿಜಯ್ ನಟನೆಯ ಕಾಲಿವುಡ್ ಚಿತ್ರ ‘ಬಿಗಿಲ್’ನಲ್ಲಿ ಶಾರುಖ್ ನಟಿಸಲಿದ್ದಾರೆ ಎಂಬ ಮಾತು ಇದೀಗ ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ, ಚಿತ್ರತಂಡ ಈಗಾಗಲೇ ಶಾರುಖ್ ಅವರನ್ನು ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡಿದೆ. ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರದ ಒಂದು ಹಾಡಿನಲ್ಲಿ ವಿಜಯ್ ಜತೆ ನರ್ತಿಸುವ ಸಾಧ್ಯತೆಗಳಿವೆಯಂತೆ. ಈವರೆಗೂ ಶಾರುಖ್ 32 ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಆದರೆ, ಇದುವರೆಗೂ ತಮಿಳು ಸಿನಿಮಾದಲ್ಲಿ ನಟಿಸಿಲ್ಲ. ಒಂದುವೇಳೆ, ಈ ಆಫರ್ ಒಪ್ಪಿಕೊಂಡು ನಟಿಸಿದರೆ, ‘ಬಿಗಿಲ್’ ಅವರ ನಟನೆಯ ಮೊದಲ ಕಾಲಿವುಡ್ ಸಿನಿಮಾ ಅಗಲಿದೆ. ‘ಬಿಗಿಲ್’ ಎಂದರೆ ಶಿಳ್ಳೆ ಎಂಬ ಅರ್ಥವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಬಿಗಿಲ್’ ವಿಜಯ್ ಮತ್ತು ನಿರ್ದೇಶಕ ಅಟ್ಲೀ ಕಾಂಬಿನೇಷನ್ನಿನ ಹ್ಯಾಟ್ರಿಕ್ ಸಿನೆಮಾ ಕ್ರೀಡೆಯನ್ನು ಪ್ರಧಾನವಾಗಿಟ್ಟುಕೊಂಡು ಸಿನಿಮಾದ ಕಥೆ ಮಾಡಲಾಗಿದ್ದು, ವಿಜಯ್ಗೆ ಎರಡು ಭಿನ್ನ ಗೆಟಪ್‍ಗಳಿವೆ. ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದು, ಬಿಗಿಲ್ ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಉಳಿದಂತೆ, ಜಾಕಿಶ್ರಾಫ್ ಡೇನಿಯಲ್ ಬಾಲಾಜಿ, ಯೋಗಿ ಬಾಬು ಮುಂತಾದವರು ಪಾತ್ರವರ್ಗದಲ್ಲಿದ್ದಾರೆ.