Tuesday, January 21, 2025
ಸುದ್ದಿ

ಬಂಟ್ವಾಳದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಾಸಿಕ ಕುಂದುಕೊರತೆ ಸಭೆ – ಕಹಳೆ ನ್ಯೂಸ್

ಬಂಟ್ವಾಳ: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮಾಸಿಕ ಕುಂದುಕೊರತೆ ಸಭೆ ತಹಶೀಲ್ದಾರರಾದ ರಶ್ಮಿ ಅವರ ಅಧ್ಯಕ್ಷತೆಯಲ್ಲಿ ತಾ.ಪಂ.ನ ಎಸ್. ಜಿ.ಎಸ್.ವೈ ಸಭಾಂಗಣದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿ ಸಭೆಯಲ್ಲಿ ವಿಷಯ ವಾರು ಚರ್ಚೆಗಳು ನಡೆಯುತ್ತದೆ ಆದರೆ ಯಾವುದೇ ರೀತಿಯ ಕೆಲಸಗಳು ನಡೆಯುದಿಲ್ಲ ಎಂಬ ಆರೋಪ ಸಭೆಯಲ್ಲಿ ಪ್ರಮುಖರಿಂದ ಕೇಳಿ ಬಂತು. ಇದಕ್ಕೆ ಉತ್ತರಿಸಿದ ತಹಶಿಲ್ದಾರ್ ರಶ್ಮಿ ಅವರು ನಾನು ಚಾರ್ಜ್ ತೆಗೆದುಕೊಂಡು ಕೆಲವೆ ದಿನಗಳಾಗಿವೆ. ಈ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಂಡು ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿ.ಸಿ.ಮನ್ನಾ ಜಮೀನನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದುಕೊಂಡು ಗಿಡನೆಟ್ಟ ಬಗ್ಗೆ ಸಾಕಷ್ಟು ವಾದ ವಿವಾದಗಳು ನಡೆದ ಬಳಿಕ ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲು ಅವಕಾಶ ಕೇಳಿದರು.

ವಿಟ್ಲಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಯ ಮೂರು ಮನೆಯವರಿಗೆ ರಸ್ತೆ ನಿರ್ಮಾಣ ಮಾಡಲು ಗ್ರಾ.ಪಂ.ನಿರ್ಣಾಯ ಮಾಡಲಾಗಿದ್ದರೂ ಕೂಡಾ ಕಂದಾಯ ಇಲಾಖೆ ಇದರ ಬಗ್ಗೆ ಆಸಕ್ತಿ ವಹಿಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಇಲಾಖೆಗಳು ಗ್ರಾ.ಪಂಚಾಯತ್‍ಗಳು , ಜನಪ್ರತಿನಿಧಿಗಳು ನಮಗೆ ಬೇಕಾ ಎಂದು ಪ್ರಶ್ನಿಸಿದರು.

ಅಬಕಾರಿ ರಸ್ತೆ ನೀರು ವಿದ್ಯುತ್ ಹೀಗೆ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆಯಾಯಿತು. ತಾ.ಪಂ ಮುಖ್ಯಾಧಿಕಾರಿ ರಾಜಣ್ಣ, ಸಮಾಜ ಕಲ್ಯಾಣಧಿಕಾರಿ ಉಪಸ್ಥಿತರಿದ್ದರು