Tuesday, January 21, 2025
ಸುದ್ದಿ

ಇಂದು ದುರಸ್ತಿ ಕಾರ್ಯದ ಪ್ರಯುಕ್ತ ವಿದ್ಯುತ್‍ನಲ್ಲಿ ವ್ಯತ್ಯಯ – ಕಹಳೆ ನ್ಯೂಸ್

ಪುತ್ತೂರು: 110 ಕೆ.ವಿ. ನೆಟ್ಲ ಮುಡ್ನೂರು-ಪುತ್ತೂರು ವಿದ್ಯುತ್ ಮಾರ್ಗದಲ್ಲಿ ದುರಸ್ತಿ ಕಾರ್ಯವನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ವತಿಯಿಂದ ಹಮ್ಮಿಕೊಂಡಿರುವುದರಿಂದ ಇಂದು ಪೂರ್ವಾಹ್ನ 10.30ರಿಂದ ಅಪರಾಹ್ನ 2:30 ರ ತನಕ ಕರೆಂಟ್ ಇರುವುದಿಲ್ಲ. ಆದ್ದರಿಂದ 110/33/11 ಕೆವಿ ಪುತ್ತೂರು, ಕರಾಯ ಹಾಗೂ 33 ಕೆವಿ ಕ್ಯಾಂಪ್ಕೋ, ಕುಂಬ್ರ, ಬೆಳ್ಳಾರೆ, ಸುಳ್ಯ, ಸವಣೂರು, ನೆಲ್ಯಾಡಿ, ಕಡಬ, ಬಿಂದು ಫ್ಯಾಕ್ಟರಿ ಮತ್ತು ಸುಬ್ರಹ್ಮಣ್ಯ ಉಪ ವಿದ್ಯುತ್ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‍ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪುತ್ತೂರು ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು