Tuesday, January 21, 2025
ಸುದ್ದಿ

ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ – ಕಹಳೆ ನ್ಯೂಸ್

ಅಲಂಕಾರು : ಶ್ರೀ ದೇವಿ ಸ್ಪೋಟ್ರ್ಸ್ ಕ್ಲಬ್ ಶರವೂರು ಇವರ ವತಿಯಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಾಡಿ ಕೊಪ್ಪದಲ್ಲಿ ನಡೆಯಿತು. ಆ ಶಾಲೆಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿಯ ವರೆಗೆ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ವರ್ಷಕ್ಕೆ ಬೇಕಾಗುವಷ್ಟು ಪುಸ್ತಕವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ದೇವಿ ಸ್ಪೋಟ್ರ್ಸ್ ಕ್ಲಬ್‍ನ ಅಧ್ಯಕ್ಷ ಕಿರಣ್ ಕುಮಾರ್ ಕೆ.ಜೆ ಗೌಡ, ಉಪಾಧ್ಯಕ್ಷ ಹರೀಶ್ ಗೌಡ ಎಣಿತಡ್ಕ, ಕಾರ್ಯದರ್ಶಿ ಹರೀಶ್ ಕಮ್ಮಿಥಿಲ್ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು ಸುರೇಶ್ ಎಣಿತಡ್ಕ, ಶಾಲಾಮುಖ್ಯ ಶಿಕ್ಷಕಿ ಚೆನ್ನಮ್ಮ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು