Tuesday, January 21, 2025
ಸುದ್ದಿ

ಸಂಚಾರ ನಿಯಮ ಉಲ್ಲಂಘಿಸಿದರೆ ಭಾರಿ ದಂಡ! – ಕಹಳೆ ನ್ಯೂಸ್

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದರೆ ಭಾರಿ ದಂಡ ವಿಧಿಸಲಾಗುತ್ತದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದರೂ ಕೂಡ ಯಾವತ್ತಿನಿಂದ ಜಾರಿಗೆ ಬರುತ್ತದೆ ಎನ್ನುವುದು ತಿಳಿದಿರಲಿಲ್ಲ. ಜುಲೈ 20ರ ನಂತರ ಸಂಚಾರ ನಿಯಮ ಪಾಲಿಸದಿದ್ದರೆ ಭಾರಿ ದಂಡ ತೆರಬೇಕಾಗುತ್ತದೆ ಎಂದು ಹೆಚ್ಚುವರಿ ಆಯುಕ್ತ ಹರಿಶೇಖರನ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅತಿ ವೇಗದ ಚಾಲನೆ, ಮೊಬೈಲ್‍ನಲ್ಲಿ ಸಂಭಾಷಣೆ ನಿರತ ವಾಹನ ಚಾಲನೆ, ವಿಮೆ ಇಲ್ಲದೆ ವಾಹನಗಳ ಚಾಲನೆ ಹಾಗೂ ನಿಲುಗಡೆ ನಿಷೇಧಿತ ಪ್ರದೇಶಗಳಲ್ಲಿ ವಾಹನ ನಿಲುಗಡೆ ಪ್ರಕರಣಗಳ ದಂಡ ಮೊತ್ತವನ್ನು ದುಪ್ಪಟ್ಟುಗೊಳಿಸಿ ರಾಜ್ಯ ಸಾರಿಗೆ ಆದೇಶ ಹೊರಡಿಸಿತ್ತು. ಈ ಪರಿಷ್ಕೃತ ದಂಡ ಪ್ರಯೋಗವು ಶನಿವಾರದಿಂದ ನಗರ ವ್ಯಾಪ್ತಿ ಜಾರಿಗೆ ಬರಲಿದೆ.
ಅತಿ ವೇಗದ ಚಾಲನೆಗೆ 1000 ರೂ ದಂಡ, ಮೊಬೈಲ್ ಬಳಕೆಗೆ 2 ಸಾವಿರ ರೂ, ವಿಮೆ ಇಲ್ಲದ ವಾಹನ ಚಾಲನೆಗೆ 1 ಸಾವಿರ ರೂ, ನೋ ಪಾಕಿರ್ಂಗ್ನಲ್ಲಿ ಗಾಡಿ ನಿಲ್ಲಿಸಿದರೆ 1 ಸಾವಿರ ರೂ ದಂಡ ಕಟ್ಟಬೇಕಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು