Tuesday, January 21, 2025
ಸಿನಿಮಾ

ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ‘ಭರಾಟೆ’ ಬಿಡುಗಡೆ ದಿನಾಂಕ ಬಹಿರಂಗ – ಕಹಳೆ ನ್ಯೂಸ್

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಭರಾಟೆ’ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಸೆಪ್ಟೆಂಬರ್ 27ರಂದು ಭರಾಟೆ ಚಿತ್ರವು ದೇಶದಾದ್ಯಂತ ಬಿಡುಗಡೆಯಾಗಲಿದೆ ಎಂಬ ಅಧಿಕೃತ ಮಾಹಿತಿ, ಅನಧಿಕೃತವಾಗಿ ಚಿತ್ರತಂಡದಿಂದ ಹೊರಬಿದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

2017ರಲ್ಲಿ ಬಿಡುಗಡೆಯಾಗಿದ್ದ ‘ಮಫ್ತಿ’ ಚಿತ್ರದ ಬಳಿಕ ಶ್ರೀಮುರಳಿ ಅಭಿನಯದ ಯಾವುದೇ ಚಿತ್ರವು ತೆರೆಗೆ ಬಂದಿಲ್ಲ. ಈ ಕಾರಣಕ್ಕೆ ಮುರಳಿ ಅಭಿಮಾನಿಗಳು ಭರಾಟೆ ಚಿತ್ರವನ್ನು ಕುತೂಹಲದಿಂದ ಕಾಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರೋರಿಂಗ್ ಸ್ಟಾರ್ ಕೈನಲ್ಲಿ ಬಹಳಷ್ಟು ಚಿತ್ರಗಳಿವೆ. ಭರಾಟೆ ಸೇರಿದಂತೆ ‘ನಂದೇ’, ‘ಮದಗಜ’, ‘ಯಜ್ಞ’, ‘ಉಗ್ರಂ ವೀರಂ’ ಚಿತ್ರಗಳು ಈಗಾಗಲೇ ಶ್ರೀಮುರಳಿ ನಾಯಕತ್ವದ ಚಿತ್ರಗಳು ಎಂದು ಘೋಷಣೆಯಾಗಿವೆ. ಆದರೆ, ಭರಾಟೆ ಚಿತ್ರವನ್ನು ಹೊರತುಪಡಿಸಿದರೆ ಇನ್ಯಾವ ಚಿತ್ರಗಳು ಸಹ ಬಿಡುಗಡೆ ಹಂತಕ್ಕೆ ಬಂದಿಲ್ಲ ಎನ್ನಬಹುದು.

‘ಭರಾಟೆ’ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ. ಸುಪ್ರೀತ್ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ತಾರಾ ಸಹೋದರರಾದ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಶರ್ಮ ಮೊದಲ ಬಾರಿಗೆ ‘ಭರಾಟೆ’ ಮೂಲಕ ಒಂದೇ ಚಿತ್ರದದಲ್ಲಿ ಜೊತೆಯಾಗಿ ಅಭಿನಯಿಸಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಈ ಚಿತ್ರದಲ್ಲಿ ಸ್ಪೆಷಲ್ ಸಾಂಗ್‍ನಲ್ಲಿ ಮಿಂಚಿದ್ದಾರೆ.