Thursday, November 28, 2024
ಆರೋಗ್ಯಸುದ್ದಿ

ಬಹು ಉಪಯೋಗಕಾರಿ ಮಾವಿನ ಎಲೆ – ಕಹಳೆ ನ್ಯೂಸ್

ಮಾವಿನ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಾತ್ರವಲ್ಲ, ಶುಭ ಸಮಾರಂಭದ ವೇಳೆ ತೋರಣ ಕಟ್ಟಲು ಬಳಸುವ ಅದರ ಎಲೆಯಲ್ಲಿಯೂ ಕೂಡ ಆರೋಗ್ಯದ ಸಮಸ್ಯೆಗೆ ಪರಿಹಾರ ಅಡಗಿದೆಯಂತೆ. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಬಳಲುತ್ತಿರುವ ಸಮಸ್ಯೆಗೆ ಇದು ರಾಮಾಬಾಣ.

10 ರಿಂದ 15 ಮಾವಿನ ಎಲೆಗಳನ್ನು ತೆಗೆದುಕೊಂಡು ಸ್ವಚ್ಚ ಮಾಡಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿರಿ ರಾತ್ರಿಯಿಡಿ ಅದೇ ನೀರಿನಲ್ಲಿ ಎಲೆಗಳನ್ನು ಬಿಡಿ. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಎಲೆಗಳನ್ನು ತೆಗೆದು ನೀರನ್ನು ಕುಡಿಯಿರಿ. ನೀವು ಎರಡು ಅಥವಾ ಮೂರು ತಿಂಗಳ ಕಾಲ ಈ ವಿಧಾನವನ್ನು ಬಳಸಿದರೆ ಮಧು ಮೇಹ ನಿಯತ್ರಣದಲ್ಲಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾವಿನ ಎಲೆಗಳನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿ. ನಂತರ ಅದನ್ನು ಪುಡಿ ಮಾಡಿ, ಪ್ರತಿದಿನ ಒಂದು ಚಮಚ ಈ ಪುಡಿಯನ್ನು ಸೇವನೆ ಮಾಡುವುದರಿಂದ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾವುಗಳ ಎಲೆಗಳ ಚಹಾ ಕುಡಿದರೆ ಜ್ವರ, ಭೇದಿ, ನಿದ್ರಾಹೀನತೆ, ಉಬ್ಬಿರುವ ರಕ್ತನಾಳಗಳು, ಅಸ್ತಮಾ, ಗಂಟಲೂತ ಮತ್ತು ಶೀತಗಳಂತಹ ಹಲವಾರು ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಈ ಎಲೆಗಳು ನಿಮ್ಮ ರಕ್ತದ ಒತ್ತಡ ಕಡಿಮೆ ಮತ್ತು ನಿಮ್ಮ ರಕ್ತನಾಳಗಳನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತದೆ.