Tuesday, January 21, 2025
ಸಿನಿಮಾಸುದ್ದಿ

ಅತೀ ಶೀಘ್ರದಲ್ಲಿ ತರೆಗಪ್ಪಳಿಸಲಿದೆ ಬಹುನಿರೀಕ್ಷಿತ ‘ಇಂಗ್ಲೀಷ್’ – ಕಹಳೆ ನ್ಯೂಸ್

ಈ ಬಾರಿ ಕೋಸ್ಟಲ್‍ವುಡ್‍ನಲ್ಲಿ ‘ಕಟಪಾಡಿ ಕಟ್ಟಪ್ಪ’ ಚಿತ್ರ ಹಿಟ್ ಎನಿಸಿಕೊಂಡರೆ, ಮತ್ಯಾವ ಚಿತ್ರವೂ ಬಿಡುಗಡೆಗೆ ಮುನ್ನ ಮಾಡಿದ್ದ ಸದ್ದನ್ನು, ಬಿಡುಗಡೆಯ ನಂತರ ಮಾಡಲೇ ಇಲ್ಲ. ಕೊನೆಯದಾಗಿ ಬಿಡುಗಡೆಗೊಂಡ ತುಳು ಚಿತ್ರ ‘ಆಯೆ ಏರ್’.
ಇದಾದ ಮೇಲೆ ‘ಅಪ್ಪೆ ಟೀಚರ್’ ಮತ್ತು ‘ಚಾಲಿಪೋಲಿಲು’ ಮರು ಬಿಡುಗಡೆಯಾದದ್ದನ್ನು ಬಿಟ್ರೆ, ಯಾವೊಂದು ತುಳು ಚಿತ್ರವೂ ಥಿಯೇಟರಿನತ್ತ ಸುಳಿಯಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಆಗಸ್ಟ್ ತಿಂಗಳಿನಲ್ಲಿ ಸಾಲು ಸಾಲು ತುಳು ಚಿತ್ರಗಳು ರಿಲೀಸ್‍ಗೆ ರೆಡಿಯಾಗುತ್ತಿವೆ ಅಂತಹವುಗಳಲ್ಲಿ ಮುಂಚೂಣಿಯ ಸ್ಥಾನದಲ್ಲಿರುವ ಸಿನೆಮಾ ‘ಇಂಗ್ಲೀಷ್’.

ಜಾಹೀರಾತು
ಜಾಹೀರಾತು
ಜಾಹೀರಾತು

ನಿರ್ದೇಶಕ ಸೂರಜ್ ಶೆಟ್ಟಿ ಅವರ ‘ಇಂಗ್ಲೀಷ್’ ಸಿನೆಮಾ ಶೂಟಿಂಗ್ ಪೂರ್ಣಗೊಳಿಸಿ ಈಗ ಬಾಕಿ ಉಳಿದ ಎರಡು ಹಾಡಿನ ಶೂಟಿಂಗ್ ನಡೆಸಲು ರೆಡಿಯಾಗಿದೆ. ಸಿನೆಮಾದ ಎಡಿಟಿಂಗ್ ಕೂಡ ಈಗಾಗಲೇ ಪೂರ್ಣಗೊಂಡಿದ್ದು, ಬಾಕಿ ಉಳಿದ ಎರಡು ಹಾಡುಗಳನ್ನು ಅದ್ಧೂರಿಯಾಗಿ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿದೆ.

ಡೇರಿಂಗ್ ಸ್ಟಾರ್ ಪೃಥ್ವಿ ಅಂಬರ್ ಜೊತೆಗೆ ‘ಪಿಲಿಬೈಲ್ ಯಮುನಕ್ಕ’ ನಂತರ ದ್ವಿತೀಯ ಬಾರಿ ಇಬ್ಬರೂ ಜೊತೆಯಾಗಿ ಮಾಡುತ್ತಿರುವ ಚಿತ್ರ ‘ಇಂಗ್ಲೀಷ್’. ಈ ಚಿತ್ರಕ್ಕೆ ನಿರ್ಮಾಪಕರಾಗಿರುವುದು ಈಗಾಗಲೇ ಕನ್ನಡದಲ್ಲಿ ಸಿನೆಮಾ ನಿರ್ಮಾಣ ಮಾಡಿ ಅನುಭವವಿರುವ ಹರೀಶ್ ಶೇರಿಗಾರ್.

ಇನ್ನು ಇಲ್ಲಿ ಪೃಥ್ವಿಗೆ ನಾಯಕಿಯಾಗಿ ನವ್ಯ ಪೂಜಾರಿ ನಟಿಸುತ್ತಿದ್ದಾರೆ. ಹಾಗು ಪ್ರಮುಖ ಪಾತ್ರದಲ್ಲಿ ಲೆಜೆಂಡ್ ಕನ್ನಡ ನಟ ಅನಂತ್‍ನಾಗ್ ಇದ್ದಾರೆ. ಉಳಿದಂತೆ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ವಿಸ್ಮಯ ವಿನಾಯಕ್, ಸಂದೀಪ್ ಶೆಟ್ಟಿ, ಪ್ರಸನ್ನ ಬೈಲೂರು ಮತ್ತಿತರರು ನಟಿಸಿದ್ದಾರೆ.