Tuesday, January 21, 2025
ಸಿನಿಮಾಸುದ್ದಿ

ಸ್ವಾತಂತ್ರ್ಯ ದಿನಕ್ಕೆ ನಾವು ನೋಡಬಹುದು ಭಾರತದ ಪ್ರಥಮ ಮಂಗಳಯಾನ – ಕಹಳೆ ನ್ಯೂಸ್

ಭಾರತದ ಮಂಗಳಯಾನದ ಸತ್ಯ ಕಥೆಯಾಧಾರಿತ ‘ಮಿಷನ್ ಮಂಗಲ್’ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಎಂದು ಅಕ್ಷಯ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರ ಫೋಟೋಗಳಿದ್ದು, ಕೆಳಗಡೆ ಮಂಗಳ ಗ್ರಹದ ಕ್ಷಕೆಯ ಸುತ್ತ ಗ್ರಹಗಳು ಸುತ್ತುತ್ತಿರುವಂತೆ ಕಾಣುತ್ತಿದೆ. ನೆಲದಿಂದ ಚಿಮ್ಮುತ್ತಿರುವ ಉಡಾವಣಾ ವಾಹಕ ಅಕ್ಷಯ್ ಕುಮಾರ್ ಹಾಗೂ ಇತರ ಕಲಾವಿದರನ್ನು ವಿಂಗಡಿಸಿದಂತೆ ಕಾಣುತ್ತಿದ್ದು, ಪೋಸ್ಟರ್‌ನ ಎರಡು ಕಡೆಗಳಲ್ಲಿ ನೀಲಿ ಬಣ್ಣ ಇದೆ.
ಪೋಸ್ಟರ್‌ನ ಮೊದಲ ಭಾಗದಲ್ಲಿ ಅಕ್ಷಯ್ ಕುಮಾರ್ ಸ್ವಲ್ಪ ಗಡ್ಡದೊಂದಿಗೆ ಲುಕ್ ಕೊಡುತ್ತಿದ್ದರೆ, ಮತ್ತೊಂದು ಪೋಸ್ಟರ್ ನಲ್ಲಿ ವಿದ್ಯಾಬಾಲನ್, ಸೋನಾಕ್ಷಿ ಸಿನ್ಹಾ, ತಾಪ್ಸಿ ಪನ್ನು, ನಿತ್ಯಾ ಮೆನನ್, ಶರ್ಮಾನ್ ಜೋಷಿ ಮತ್ತಿತರ ಕಲಾವಿದರ ಫೋಟೋಗಳಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತದ ಮಂಗಳಯಾನದ ಸತ್ಯ ಕಥೆಯಾಧಾರಿತ ಈ ಚಿತ್ರದಲ್ಲಿ, ಸಾಮಾನ್ಯರು ಹೇಗೆ ಅತ್ಯುನ್ನತ ಮಟ್ಟದಲ್ಲಿ ಸಾಧನೆ ಮಾಡಿ ತೋರಿಸುತ್ತಾರೆ ಎಂಬುದನ್ನು ತೋರಿಸಲಾಗುತ್ತಿದೆ. ಜಗನ್ ಶಕ್ತಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಅಕ್ಷಯ್ ಕುಮಾರ್, ಆರ್. ಬಲ್ಕಿ ನಿರ್ಮಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು