Tuesday, January 21, 2025
ಸುದ್ದಿ

‘ಕೆಜಿಎಫ್ 2’ಗೆ ಮಿನರ್ವ ಮಿಲ್‍ನಲ್ಲಿ ಹಾಕಲಾಗಿದೆ ಬೃಹತ್ ಸೆಟ್! – ಕಹಳೆ ನ್ಯೂಸ್

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 1’ ಅದ್ಧೂರಿ ಸೆಟ್ ಮೂಲಕವೇ ಗಮನ ಸೆಳೆದಿತ್ತು.
ಗಣಿ ಪ್ರದೇಶದಲ್ಲಿ ಹಾಕಿದ್ದ, ನರಾಚಿ ಮತ್ತು ಹಳೇ ಬಾಂಬೆಯನ್ನೇ ಹೋಲುವ ಬೀದಿಗಳನ್ನು ನೋಡಿ ಸಿನಿರಸಿಕರು ಥ್ರಿಲ್ ಆಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಲಾ ನಿರ್ದೇಶಕ ಶಿವಕುಮಾರ್ ಕಾರ್ಯ ವೈಖರಿಗೆ ಎಲ್ಲೆಡೆಯಿಂದ ಪ್ರಶಂಸೆಗಳು ಕೇಳಿಬಂದಿದ್ದವು.
‘ಕೆಜಿಎಫ್ ಚಾಪ್ಟರ್ 2’ ಚಿತ್ರೀಕರಣ ಬೆಂಗಳೂರಿನಿಂದ ಶುರುವಾಗಿ ನಂತರ ಮೈಸೂರು, ಮಂಗಳೂರು ಮತ್ತು ಪಾಂಡಿಚೇರಿಯ ಲೊಕೇಷನ್‍ಗಳ ಶೆಡ್ಯೂಲ್ ಮುಗಿದು ಇದೀಗ ಮತ್ತೆ ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ ಚಿತ್ರತಂಡ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿನೆಮಾ ಚಿತ್ರೀಕರಣಕ್ಕೆಂದೇ ಹೆಸರುವಾಸಿಯಾಗಿರುವ ಬೆಂಗಳೂರಿನ ಮಿನರ್ವ ಮಿಲ್‍ನಲ್ಲಿ ಕಲಾನಿರ್ದೇಶಕ ಶಿವಕುಮಾರ್ ಸಾರಥ್ಯದಲ್ಲಿ ಅದ್ಧೂರಿ, ಬೃಹತ್ ಸೆಟ್‍ಗಳನ್ನು ಹಾಕಲಾಗಿದೆ. ಇದು ಕೂಡಾ ಹಳೇ ಬಾಂಬೆಯ ಸೆಟ್ ಎನ್ನಲಾಗುತ್ತಿದ್ದು, 340ಕ್ಕೂ ಅಧಿಕ ಕೆಲಸಗಾರರು 45 ದಿನ ಸೆಟ್ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ.
ಇದರ ಜೊತೆಗೆ ಕೋಲಾರದ ಗಣಿ ಮಣ್ಣಿನಲ್ಲೂ ನರಾಚಿಯ ಸೆಟ್ ನಿರ್ಮಾಣ ಕೆಲಸವೂ ಪ್ರಗತಿಯಲ್ಲಿದೆ.