Tuesday, January 21, 2025
ಸುದ್ದಿ

ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಆಮೀಷವೊಡ್ಡುವ ಜಾಲ ಪತ್ತೆ – ಕಹಳೆ ನ್ಯೂಸ್

ಮಂಗಳೂರು: ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತೇವೆಂದು ಆಮೀಷವೊಡ್ಡುವ ಜಾಲವೊಂದು ಪತ್ತೆಯಾಗಿದೆ. ದೆಹಲಿಯಿಂದ ಕರ್ನಾಟಕದ ಜನರಿಗೆ ಈ ತಂಡದಿಂದ ವಂಚನೆ ಮಾಡಲಾಗುತ್ತಿತ್ತು. ವ್ಯಕ್ತಿಯೋರ್ವರ ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ, ಜಾಲದ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ.

ಐದು ಶೇಕಡ ಬಡ್ಡಿಯಲ್ಲಿ ಸಾಲ ನೀಡುವ ಆಮೀಷ ಮಂಗಳೂರಿನ ವ್ಯಕ್ತಿಗೆ ಒಡ್ಡಿದ್ದರು. ಮೊದಲು ಮೂರು ತಿಂಗಳ ಇಎಂಐ ಕಟ್ಟಬೇಕೆಂದು ಹೇಳಲಾಗಿತ್ತು. ಅದರಂತೆ 1.70 ಲಕ್ಷ ರೂ ಕಟ್ಟಲಾಗಿತು.್ತ ಹಣ ಕಟ್ಟಿದ ಬಳಿಕ ಸಂಪರ್ಕಕ್ಕೆ ಸಿಗದ ವಂಚಕರ ವಿರುದ್ಧ ಮಂಗಳೂರು ಸೈಬರ್ ಕ್ರೈಂ ಬ್ರಾಂಚ್‍ನಲ್ಲಿ ಪ್ರಕರಣ ದಾಖಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ಸ್‍ಪೆಕ್ಟರ್ ಶ್ಯಾಮ್ ಸುಂದರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಯಿತು. ದೆಹಲಿ ಪೊಲೀಸರ ನೆರವಿನೊಂದಿಗೆ ಅರೋಪಿಗಳ ದೆಹಲಿ ಕಚೇರಿಗೆ ದಾಳಿ ಮಾಡಿ, ವಂಚಕ ಯೂಸುಫ್ ಖಾನ್ ಎಂಬಾತ ಬಂಧಿಸಲಾಗಿದೆ. ಇನ್ನೂ ಇಬ್ಬರು ಪರಾರಿಯಾಗಿದ್ದು, ಆರೋಪಿಗಳು ಉತ್ತರಪ್ರದೇಶ ಮೂಲದವರು ಎಂದು ತಿಳಿದು ಬಂದಿದೆ. ಬಂಧಿತನಿಂದ 31 ಮೊಬೈಲ್, 2 ಲ್ಯಾಪ್‍ಟಾಪ್, 70 ಸಾವಿರ ನಗದು, ಜನರ ನಂಬರ್ ಇರುವ ಮೊಬೈಲ್ ನಂಬರ್‍ನ ಪುಸ್ತಕ ವಶಪಡಿಸಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು