Wednesday, January 22, 2025
ಸುದ್ದಿ

ಮಂಗಳೂರು ಪೊಲೀಸರ ಮಿಂಚಿನ ಕಾರ್ಯಚರಣೆ : ಅರೋಪಿಗಳು ಅಂದರ್ – ಕಹಳೆ ನ್ಯೂಸ್

ಮಂಗಳೂರು : ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಅಡ್ಡಕ್ಕೆ ದಾಳಿ ನಡೆಸಿ ಸುಮಾರು 31 ಲಕ್ಷದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗಮಿಜಾರು ಗ್ರಾಮದ ಪದಮಲೆ ಮತ್ತು ಮಂಜನಬೈಲು ಗ್ರಾಮದಲ್ಲಿ ನಡೆದಿದೆ.

ಜೋಕಿಂ ಕೊರೆಯ, ಹೇಮಚಂದ್ರ ಮತ್ತು ಜಗದೀಶ್ ಎಂಬವರು ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಕೆಂಪು ಕಲ್ಲಿನ ಗಣಿಗಾರಿಕೆಯನ್ನು ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಣಂಬೂರು ಉತ್ತರ ಉಪವಿಭಾಗದ ಎಸಿಪಿ ಶ್ರೀ ಶ್ರೀನಿವಾಸ ಆರ್.ಗೌಡರವರ ನೇತೃತ್ವದ ರೌಡಿ ನಿಗ್ರಹ ದಳ ದಾಳಿ ನಡೆಸಿದೆ. ದಾಳಿ ನಡೆಸಿ ಕೆಂಪು ಕಲ್ಲುಗಳನ್ನು ಕೊರೆಯುವ 4 ಟ್ರಿಲ್ಲರ್ ಡ್ರೆಸ್ಸಿಂಗ್ ಮಷೀನ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವೇಳೆ ಮೂಡಬಿದ್ರೆ ತಾಲೂಕು ಬಡಗಮಿಜಾರು ಗ್ರಾಮದ ಬಂಗೇರಪದವು ಎಂಬಲ್ಲಿಯೂ ದಾಳಿ ನಡೆಸಿದ್ದಾರೆ. ದಾಳಿ ಸಂದರ್ಭದಲ್ಲಿ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದ ಕೆಎ-19-ಸಿ-2031, ಕೆಎ- 19-ಬಿ-7199, ಕೆಎ-42-1271, ಕೆಎ-19-ಎಎ-8904 ನೇ ಲಾರಿ ಮತ್ತು ಲಾರಿಗಳಲ್ಲಿ ತುಂಬಿದ್ದ ಕೆಂಪು ಕಲ್ಲುಗಳನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದುಕೊಂಡಿದ್ದಾರೆ. ಮುಂದಿನ ಕ್ರಮದ ಬಗ್ಗೆ ಉಪನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಗಳೂರು ಇವರಿಗೆ ಹಸ್ತಾಂತರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಾಚರಣೆಯನ್ನು ಮಂಗಳೂರಿನ ಪೊಲೀಸ್ ಆಯುಕ್ತರು ಸಂದೀಪ್ ಪಾಟೀಲ್ ರವರ ನಿರ್ದೇಶನದಂತೆ, ಹನಮಂತರಾಯ ಉಪ-ಪೊಲೀಸ್ ಆಯುಕ್ತರು ಐಪಿಎಸ್. ಮಂಗಳೂರು ನಗರ ಮತ್ತು ಲಕ್ಷ್ಮೀ ಗಣೇಶ್ ಮಾನ್ಯ ಪೊಲೀಸ್ ಉಪ-ಆಯುಕ್ತರು, ಮಂಗಳೂರು ನಗರ ಇವರ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿದೆ.

ಇವರಿಗೆ ಶ್ರೀನಿವಾಸ ಆರ್ ಗೌಡ, ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ಉತ್ತರ ಉಪ-ವಿಭಾಗ ಪಣಂಬೂರು ಇವರ ಆದೇಶದಂತೆ ಮೂಡಬಿದ್ರೆ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಶ್ರೀ ದೇಜಪ್ಪ ಮತ್ತು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿಗಳಾದ ಎಎಸ್‍ಐ ಮೊಹಮ್ಮದ್, ಕುಶಲ ಮಣಿಯಾಣಿ, ವಿಜಯ್ ಕಾಂಚನ್,ಸತೀಶ್ ಎಮ್. ಇಸಾಕ್ ಹಾಗೂ ಶರಣ್ ಕಾಳಿ ಹಾಗೂ ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸ್ ಸಿಬ್ಬಂದಿಗಳಾದ ಶಿವರಾಜ್, ಬಂದೇ ನವಾಜ್, ಹಾಗೂ ಮೂಡಬಿದಿರೆ ಠಾಣಾ ಪೊಲೀಸರು ದಾಳಿಯಲ್ಲಿ ಭಾಗವಹಿಸಿದ್ದರು.