Wednesday, January 22, 2025
ಸುದ್ದಿ

ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ದುಬಾರಿ ? ಯಾವುದು ಅಗ್ಗ ? – ಕಹಳೆ ನ್ಯೂಸ್

ನವದೆಹಲಿ : ನರೇಂದ್ರ ಮೋದಿ ನೇತೃತ್ವದ ಪೂರ್ಣಾವಧಿ ಬಜೆಟ್ ಮಂಡನೆ ಮಾಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಡಿಜಿಟಲ್ ಪಾವತಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕೆಲ ಐಷಾರಾಮಿ ವಸ್ತುಗಳ ಆಮದು ಸುಂಕ ಏರಿಕೆ ಮಾಡಿದ್ದಾರೆ.

ಬಜೆಟ್‍ನಿಂದ ನಮ್ಮ-ನಿಮ್ಮ ನಿತ್ಯ ಜೀವನದ ಮೇಲೆ ಆಗುವ ಪರಿಣಾಮಗಳೇನು? ನಾವು ದಿನ ನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಏರಿಕೆಯಾಗಲಿದೆ? ಯಾವ ವಸ್ತುಗಳ ಬೆಲೆ ಇಳಿಕೆಯಾಗಲಿದೆ? ಎಂಬುದರ ವಿವರ ಇಲ್ಲಿದೆ.
ಕೇಂದ್ರ ಬಜೆಟ್ – ತೈಲ, ಚಿನ್ನ, ಮದ್ಯ ದುಬಾರಿ
ಸರಕು ಸೇವಾ ತೆರಿಗೆ (ಜಿಎಸ್‍ಟಿ) ಜಾರಿಗೊಂಡ ಬಳಿಕ ಏಕರೂಪದ ತೆರಿಗೆ ದೇಶದೆಲ್ಲೆಡೆ ಜಾರಿಗೊಂಡಿದೆ. ಈ ಮೂಲಕ ಗ್ರಾಹಕರ ಮೇಲೆ ಬೀಳುತ್ತಿದ್ದ ಹೆಚ್ಚುವರಿ ತೆರಿಗೆಗಳ ಮೇಲೆ ನಿಯಂತ್ರಣ ಹೊಂದಲಾಗಿದೆ. ಜಿಎಸ್‍ಟಿಯಲ್ಲಿ ವಿವಿಧ ಸ್ಲಾಬ್‍ಗಳಲ್ಲಿದ್ದು, ಇದರ ಜತೆಗೆ ರಾಜ್ಯಗಳಲ್ಲಿನ ಜಿಎಸ್‍ಟಿ ಕೂಡಾ ಸೇರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ
ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ ನೀಡಲಾಗಿದ್ದು, ಇ ವಾಹನಗಳ ಜಿಎಸ್‍ಟಿ ದರವನ್ನು ಶೇಕಡಾ 12ರ ಬದಲು ಶೇಕಡಾ 5ಕ್ಕೆ ಇಳಿಕೆ ಮಾಡಲಾಗಿದೆ. ಇ-ಸ್ಟಾರ್ಟ್ ಅಪ್ ಕಂಪನಿಗಳು ಏಂಜಲ್ ತೆರಿಗೆ ಪಾವತಿ ಮಾಡಬೇಕಾಗಿಲ್ಲ. ಸೌರಫಲಕ, ಇಟ್ಟಿಗೆ, ಕಿವುಡು ಮೂಗರಿಗೆ ಬಳಸುವ ಸಾಧನಗಳು, ಇತ್ಯಾದಿಗಳ ಮೇಲಿನ ಬೆಲೆ ಇಳಿಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಮದು ವಸ್ತುಗಳ ಬೆಲೆ ಏರಿಕೆ
ಕಾರು, ಮೋಟಾರ್ ಸೈಕಲ್, ಮೊಬೈಲ್ ಫೋನ್, ಚಿನ್ನ, ಬೆಳ್ಳಿ, ವಜ್ರ, ಫ್ಯಾನ್ಸಿ ಆಭರಣಗಳು, ತರಕಾರಿ, ಹಣ್ಣಿನ ಜ್ಯೂಸ್, ಸನ್ ಗ್ಲಾಸ್, ಸುಗಂಧ ಧ್ರವ್ಯಗಳು, ಅಡುಗೆ ತಯಾರಿಸಲು ಬಳಸುವ ವಸ್ತುಗಳು, ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ ವಸ್ತುಗಳು, ಹಲ್ಲಿನ ಸ್ವಚ್ಛತೆ ಮತ್ತು ಶೇವ್‍ಗೆ ಸಂಬಂಧಿಸಿದ ವಸ್ತುಗಳು, ಬಸ್ ಮತ್ತು ಟ್ರಕ್‍ಗಳ ಟೈರುಗಳು, ರೇಷ್ಮೆ ಬಟ್ಟೆ, ಚಪ್ಪಲಿ, ಮುತ್ತು ರತ್ನಗಳು, ಸ್ಮಾರ್ಟ್ ವಾಚ್ ಸೇರಿದಂತೆ ವಿಭಿನ್ನ ಗಡಿಯಾರಗಳು, ಎಲ್‍ಇಡಿ, ಎಲ್‍ಸಿಡಿ ಟಿವಿ, ಗೃಹ ಉಪಯೋಗಿ ವಸ್ತುಗಳು, ಬಲ್ಬ್‍ಗಳು, ಆಟಿಕೆ ವಸ್ತುಗಳು, ವಿಡಿಯೋ ಗೇಮ್ ಸಾಧನಗಳು, ಕ್ರೀಡೆಗೆ ಬಳಸುವ ವಸ್ತುಗಳು, ಸಿಗರೇಟ್, ಕ್ಯಾಂಡಲ್, ಗಾಳಿಪಟ, ಆಲಿವ್ ಮತ್ತು ಕಡಲೆ ಎಣ್ಣೆಯಂಥ ಅಡುಗೆ ಎಣ್ಣೆಗಳ ಬೆಲೆ ಏರಿಕೆಯಾಗಲಿದೆ.

ಅಬಕಾರಿ ಸುಂಕ
ಮೊಬೈಲ್ ಫೋನ್ ಮತ್ತು ಸ್ಮಾರ್ಟ್ ಫೋನ್ ಉಪಕರಣಗಳ ಆಮದಿನ ಮೇಲಿದ್ದ ಅಬಕಾರಿ ಸುಂಕವನ್ನು ಬಜೆಟ್ ನಲ್ಲಿ ಶೇಕಡಾ 15 ರಿಂದ 20ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಇವುಗಳ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಲಿದೆ. ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು ಎಂಬ ಕಾರಣಕ್ಕೆ ಮೊಬೈಲ್ ಫೋನ್ ಆಮದಿನ ಮೇಲಿನ ಸುಂಕ ಏರಿಕೆ ಮಾಡಲಾಗಿದೆ. ಇದರಿಂದ ಮುಖ್ಯವಾಗಿ ಚೀನಾ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆಗಳಾದ ವಿವೋ, ಒಪ್ಪೋ, ಶಿಯೋಮಿ, ಹುವಾಯ್ ಕಂಪನಿಗಳಿಗೆ ಹೊಡೆತ ಬೀಳಲಿದ್ದರೆ, ಗ್ರಾಹಕರ ಜೇಬಿಗೆ ಮೊಬೈಲ್ ಫೋನ್‍ಗಳು ಭಾರವಾಗಲಿವೆ.