Wednesday, January 22, 2025
ಸುದ್ದಿ

ಬಜೆಟ್‍ನಲ್ಲಿ ಗ್ರಾಮೀಣಾಭಿವೃದ್ಧಿಗೆ ಒತ್ತು; 2022ಕ್ಕೆ ಎಲ್ಲಾ ಗ್ರಾಮಗಳಿಗೂ ಕರೆಂಟ್, ಗ್ಯಾಸ್ ಮತ್ತು ರೈತರ ಆದಾಯ ವೃದ್ಧಿಗೆ ಯೋಜನೆ – ಕಹಳೆ ನ್ಯೂಸ್

ಮಹಾತ್ಮಾ ಗಾಂಧಿ ಈ ದೇಶದ ಭವಿಷ್ಯ ಗ್ರಾಮಗಳ ಕೈಯಲ್ಲಿದೆ. ಗ್ರಾಮಗಳು ಆರ್ಥಿಕ ಬೆಳವಣಿಗೆಯೇ ಅಭಿವೃದ್ಧಿಯ ಕೀಲಿ ಕೈ ಎಂದು ಹೇಳಿದ್ದರು. ಅವರ ಮಾತಿನಂತೆ ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಗ್ರಾಮಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮಹತ್ತರ ಯೋಜನೆಗಳನ್ನು ರೂಪಿಸಿದೆ. ಅಲ್ಲದೆ ಗ್ರಾಮಗಳ ಅಭಿವೃದ್ಧಿಗೆ ಸಂಕಲ್ಪ ಹೊಂದಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್‍ನಲ್ಲಿ ಗ್ರಾಮೀಣಾಭಿವೃದ್ಧಿಗೆ ಪೂರ್ಣ ಆದ್ಯತೆ ನೀಡಲಾಗಿದೆ. 2022ರ ವೇಳೆಗೆ ದೇಶದ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಸಂಪೂರ್ಣ ವಿದ್ಯುತ್, ಶುದ್ಧ ಕುಡಿಯುವ ನೀರು, ರಸ್ತೆ-ಸಾರಿಗೆ, ಅಡುಗೆ ಅನಿಲ, ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಮೂಲಭೂತ ಸೌಲಭ್ಯ ಕಲ್ಪಿಸಲು ಹಾಗೂ ರೈತರ ಆದಾಯ ವೃದ್ಧಿಗೆ ಸಂಕಲ್ಪ ಮಾಡಲಾಗಿದೆ.ಪ್ರಸ್ತುತ ಬಜೆಟ್‍ನಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಸರ್ಕಾರ ಏನೇನು ಯೋಜನೆ ರೂಪಿಸಿದೆ? ಇಲ್ಲಿದೆ ಮಾಹಿತಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು 

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕಟಿಬದ್ಧರಾಗಿರುವುದಾಗಿ ಬಜೆಟ್‍ನಲ್ಲಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಯೋಜನೆಗಳ ಕುರಿತು ಮಾಹಿತಿ ನೀಡಿದ ಅವರು, “ಕಳೆದ 5 ವರ್ಷದ ಅವಧಿಯಲ್ಲಿ ಉಜ್ವಲ ಯೋಜನಾ, ಸೌಭಾಗ್ಯ ಯೋಜನಾ ಮೂಲಕ ಗ್ರಾಮೀಣ ಜನರ ಬದುಕು ಬದಲಾಗಿದೆ. 7 ಕೋಟಿ ಜನರಿಗೆ ಗ್ಯಾಸ್ ಸಂಪರ್ಕ ನೀಡಲಾಗಿದೆ. 2022ರ ವೇಳೆಗೆ ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದ ಪ್ರತಿ ಹಳ್ಳಿಯ ಪ್ರತಿ ಮನೆಗೂ ಗ್ಯಾಸ್ ಹಾಗೂ ಕರೆಂಟ್ ಸೌಲಭ್ಯ ನೀಡಲಾಗುವುದು” ಎಂದು ಅವರು ತಿಳಿಸಿದ್ದಾರೆ.

“ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಮೂಲಕ ಕಳೆದ 5 ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮನೆ ಇಲ್ಲದ ಜನರಿಗೆ 1.5 ಕೋಟಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. 2022ರ ವೇಳೆಗೆ ಇನ್ನೂ 1.95 ಕೋಟಿ ಮನೆಗಳನ್ನು ನಿರ್ಮಿಸಿ ಜನರಿಗೆ ನೀಡಲು ಉದ್ದೇಶಿಸಲಾಗಿದೆ. 115 ದಿನಗಳಲ್ಲಿ ಪ್ರತಿ ಮನೆಯನ್ನೂ ನಿರ್ಮಿಸುವ ಗುರಿ ಹೊಂದಲಾಗಿದೆ” ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಗಳ ರಸ್ತೆ-ಸಾರಿಗೆ ಸಂಪರ್ಕದ ಕುರಿತು ಮಾಹಿತಿ ನೀಡಿದ ಅವರು, “ಗ್ರಾಮೀಣ ಭಾಗಗಳಲ್ಲಿ ಈಗಾಗಲೇ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ 2100 ಕಿ.ಮೀ ರಸ್ತೆ ನಿರ್ಮಿಸಲಾಗಿದೆ. ಮುಂದಿನ 5 ವರ್ಷದಲ್ಲಿ 80,254 ಕೋಟಿ ವೆಚ್ಚದಲ್ಲಿ 125 ಲಕ್ಷ ಕಿ.ಮೀ ರಸ್ತೆ ನಿರ್ಮಿಸುವ ಗುರಿ ಹೊಂದಲಾಗಿದೆ” ಎಂದಿದ್ದಾರೆ

ರೈತರ ಆದಾಯ ಹೆಚ್ಚಳಕ್ಕೆ ಕ್ರಮ;

ರೈತರ ಆದಾಯ ಹೆಚ್ಚಳದ ಕುರಿತು ಮಾತನಾಡಿದ ಸೀತಾರಾಮನ್, “ಜೀರೋ ಬಜೆಟ್ ಫಾಮಿರ್ಂಗ್ ಎಂಬುದು ಹೊಸ ವಿಚಾರವಲ್ಲ, ಇದು ಹಳೆಯ ಮಾದರಿಯೇ ಆದರೆ, ಇದನ್ನು ಅಭಿವೃದ್ಧಿ ಪಡಿಸುವ ಮೂಲಕ ಕಡಿಮೆ ವೆಚ್ಚ ಅಧಿಕ ಲಾಭ ಪಡೆಯಬಹುದು. ಇದರಿಂದ ರೈತರ ಆದಾಯ ವೃದ್ಧಿಯಾಗಲಿದೆ” ಎಂದು ತಿಳಿಸಿದ್ದಾರೆ. ಇದಲ್ಲದೆ, ಹಳ್ಳಿಗಳಲ್ಲಿ 2024 ಜಲ ಮಿಷನ್ ಹಮ್ಮಿಕೊಳ್ಳುವ ಮೂಲಕ ದೇಶದ ಎಲ್ಲಾ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಎಲ್ಲಾ ನೀರಾವರಿ ಇಲಾಖೆಯೂ ಒಟ್ಟಾಗಿ ಮಳೆಕೊಯ್ಲು, ಅಂತರ್ಜಲ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ನಗರಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಹಾಗೂ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡುವ ಮೂಲಕ ಹಳ್ಳಿ ಭಾಗದ ಜನರ ವಲಸೆಗೆ ತಡೆ ಹಾಗೂ ಬಯಲು ಶೌಯಾಲಯ ಮುಕ್ತ ಹಳ್ಳಿಗಳನ್ನು ರೂಪಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ.