Saturday, November 30, 2024
ಸುದ್ದಿ

ವಿಶ್ವದ ಬೃಹತ್ ಆರ್ಥಿಕತೆಯತ್ತ ಭಾರತದ ಚಿತ್ತ; 5 ಟ್ರಿಲಿಯನ್ ಡಾಲರ್ ಸಾಧನೆಗೆ ಸಿದ್ದವಾಗಿದೆ ಬಜೆಟ್‍ನಲ್ಲಿ ನೀಲಿನಕ್ಷೆ – ಕಹಳೆ ನ್ಯೂಸ್

ನವದೆಹಲಿ : ಭಾರತದ ಆರ್ಥಿಕತೆಯನ್ನು 2.5 ಟ್ರಿಲಿಯನ್ ಡಾಲರ್‍ನಿಂದ 5 ಟ್ರಿಲಿಯನ್ ಡಾಲರ್‍ಗೆ ಅಭಿವೃದ್ಧಿ ಸಾಧಿಸಲು ಸರ್ಕಾರ ಬಜೆಟ್ ಮೂಲಕ ನೀಲಿನಕ್ಷೆ ರೂಪಿಸಿದೆ. ಹಾಗಾದರೆ ಆ ನೀಲಿನಕ್ಷೆ ಯಾವುದು? ಯಾವೆಲ್ಲಾ ಕ್ಷೇತ್ರಕ್ಕೆ ಸಿಗಲಿದೆ ಬಂಪರ್? ಯಾವೆಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಲಿದೆ? 5 ಟ್ರಿಲಿಯನ್ ಆರ್ಥಿಕತೆ ಸಾಧನೆಯ ದಾರಿ ಯಾವುದು?

ವಿಶ್ವದ ಕೆಲವೇ ಕೆಲವು ಸುಸ್ಥಿರ ಆರ್ಥಿಕ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಈಗಾಗಲೇ ವಿಶ್ವದ 6ನೇ ಬಲಿಷ್ಠ ಆರ್ಥಿಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಒಟ್ಟಾರೆ ಆರ್ಥಿಕತೆ 2.5 ಟ್ರಿಲಿಯನ್ ಡಾಲರ್ ಮೀರಿ 3 ಟ್ರಿಲಿಯನ್ ಡಾಲರ್ ಕಡೆಗೆ ಹೆಜ್ಜೆ ಹಾಕಿದೆ. ಆದರೆ, 2023ರ ಹೊತ್ತಿಗೆ ಈ ಪ್ರಮಾಣವನ್ನು 5 ಟ್ರಿಲಿಯನ್ ಡಾಲರ್‍ಗೆ ಅಭಿವೃದ್ಧಿ ಪಡಿಸುವ ಮೂಲಕ ಅಮೆರಿಕಾ ನಂತರದ ಬಲಿಷ್ಠ ಆರ್ಥಿಕ ರಾಷ್ಟ್ರವಾಗುವುದು ಇದೀಗ ಭಾರತ ಮುಂದಿರುವ ಗುರಿ. ಈ ಗುರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‍ನಲ್ಲಿ ಹೊಸ ನೀಲಿನಕ್ಷೆ ರೂಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶುಕ್ರವಾರ ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್ “ಎರಡನೇ ಅವಧಿಯ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ರಕ್ಷಣೆ ಹಾಗೂ ಆರ್ಥಿಕತೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿದೆ. ರಕ್ಷಣೆ ಮತ್ತು ಆರ್ಥಿಕ ಅಭಿವೃದ್ಧಿ ಸರ್ಕಾರದ ಪ್ರಮುಖ ಉದ್ದೇಶ” ಎಂದು ಘೋಷಿಸಿದ್ದಾರೆ. ಅಲ್ಲದೆ ಈಗಾಗಲೇ 3 ಟ್ರಿಲಿಯನ್ ಆರ್ಥಿಕತೆ ಸಾಧನೆ ಮಾಡಿರುವ ಭಾರತ ಮುಂದಿನ 5 ವರ್ಷದಲ್ಲಿ 5 ಟ್ರಿಲಿಯನ್ ಆರ್ಥಿಕತೆ ಸಾಧಿಸಲಿದೆ. ಈ ಸಾಧನೆಗೆ ಹತ್ತಾರು ಯೋಜನೆಗನ್ನು ರೂಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ದೇಶದಲ್ಲಿ ಅಭಿವೃದ್ಧಿ ಹಾಗೂ ಆರ್ಥಿಕತೆಗೆ ತೊಡಕಾಗಿ ಪರಿಣಮಿಸಿರುವ ವಿಚಾರ ಎಂದರೆ ನಿರುದ್ಯೋಗ. ಹೀಗಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಮಧ್ಯಮ, ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡಿದೆ. ಆ ಮೂಲಕ ವಿದ್ಯಾವಂತ ಯುವಕರು ಸರ್ಕಾರದ ಸಹಾಯದೊಂದಿಗೆ ಉದ್ದಿಮೆ ಸ್ಥಾಪಿಸಿ ಹಣ ಗಳಿಸುವ ಹಾಗೂ ಆ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಯ ಪಾಲುದಾರರಾಗಲು ಸರ್ಕಾರ ಹೊಸ ಯೋಜನೆ ರೂಪಿಸಿದೆ.
“ಆಶ್ವಾಸ್ ವಿಶ್ವಾಸ್ ಆಕಾಂಕ್ಷ” ಘೋಷಣೆಯ ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಮುಂದಾಗಿರುವ ಸರ್ಕಾರ ಇದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ “ಪ್ರಧಾನಮಂತ್ರಿ ಕರಮ್ ಯೋಗಿ ಮಾನ್ಧನ್” ಯೋಜನೆಯನ್ನು ಜಾರಿಗೆ ತಂದಿದೆ. ಈ ಮೂಲಕ ನೂತನ ಉದ್ದಿಮೆ ಸ್ಥಾಪಿಸುವ ಯುವಕರಿಗೆ ಕೇವಲ 59 ನಿಮಿಷದಲ್ಲಿ 1 ರಿಂದ 1.5 ಕೋಟಿ ಹಣ ಸಾಲ ಸೌಲಭ್ಯ ನೀಡಲು ನಿರ್ಧರಿಸಿದೆ. ಅಲ್ಲದೆ ಸಣ್ಣ ಉದ್ದಿಮೆಗಳ ಸಾಲದ ಮೇಲೆ ವಿನಾಯಿತಿ, ಸಣ್ಣ ಕೈಗಾರಿಕೆಗಳ ಜಿಎಸ್‍ಟಿ ಸರಳೀಕರಣಕ್ಕಾಗಿ 300 ಕೋಟಿ ನೀಡಲು ಸಹ ನೂತನ ಬಜೆಟ್‍ನಲ್ಲಿ ಅನುಕೂಲ ಮಾಡಿಕೊಡಲಾಗಿದೆ.

ಸಾರಿಗೆ ಸಂಪರ್ಕದಲ್ಲಿ ಹೊಸ ಕ್ರಾಂತಿ

ಆರ್ಥಿಕ ಅಭಿವೃದ್ಧಿ ಹಾಗೂ ಸಾರಿಗೆ ವ್ಯವಸ್ಥೆಗೆ ಯಾವಾಗಲೂ ಒಂದು ನಂಟು ಇದ್ದೆ ಇರುತ್ತದೆ. ದೇಶದಲ್ಲಿ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಇಲ್ಲದೆ ಆರ್ಥಿಕ ಅಭಿವೃದ್ಧಿ ಅಸಾಧ್ಯ. ಈ ಸತ್ಯವನ್ನು ಕಂಡುಕೊಂಡಿರುವ ಸರ್ಕಾರ ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಮಾಡಲು ಮುಂದಾಗಿದೆ.

ಭಾರತ್ ಮಾಲಾ, ಸಾಗರ್ ಮಾಲಾ ಯೋಜನೆಗಳ ಮೂಲಕ ರಸ್ತೆ, ರೈಲು ಜಲ ಹಾಗೂ ವಿಮಾನಯಾನ ಸಂಪರ್ಕಕ್ಕೆ ಬಜೆಟ್‍ನಲ್ಲಿ ಒತ್ತು ನೀಡಲಾಗಿದೆ. ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲು ವಾರ್ಷಿಕ 1,6 ಲಕ್ಷ ಕೋಟಿ ಹಣ ಹೂಡಿಕೆಗೆ ನಿರ್ಧರಿಸಲಾಗಿದೆ. 2030ರ ವೇಳೆಗೆ ರೈಲ್ವೆ ಇಲಾಖೆಯಲ್ಲಿ 50 ಲಕ್ಷ ಕೋಟಿ ವಿದೇಶಿ ಹಣ ಹೂಡಿಕೆ ನರೀಕ್ಷೆ ಇದೆ ಎಂದು ಬಜೆಟ್‍ನಲ್ಲಿ ಅಂದಾಜಿಸಲಾಗಿದೆ. ಈ ಮೂಲಕ ಗೂಡ್ಸ್ ಸಾಗಾಣೆಯಲ್ಲಿ ದೇಶ ಮಹತ್ವದ ಮೈಲುಗಲ್ಲಿಗೆ ಸಾಕ್ಷಿಯಾಗಲಿದೆ.

ದೇಶದಾದ್ಯಂತ ಈಗಾಗಲೇ 657 ಕಿ.ಮೀ ಮೆಟ್ರೋ ಸಂಪರ್ಕ ನೀಡಲಾಗಿದೆ. ಮುಂದಿನ ಎರಡು ವರ್ಷದ ಅವಧಿಯಲ್ಲಿ 300 ಕಿಮೀ ಸಂಪರ್ಕ ಸಾಧಿಸಲು ಉದ್ದೇಶಿಸಲಾಗಿದೆ. ಗಂಗಾ ಒಳನಾಡು ಜಲಸಾರಿಗೆ ಒತ್ತು ನೀಡುವ ಮೂಲಕ ಜಲ ಸಂಪರ್ಕ ಸಾರಿಗೆಯನ್ನು ಅಭಿವೃದ್ಧಿ ಪಡಿಸಲಾಗುವುದು. ‘ಭಾರತೀಯ ವಿಶೇಷ ಆರ್ಥಿಕ ವಲಯ’ ಅಡಿಯಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಹೆಚ್ಚಿನ ಅವಕಾಶ ಕಲ್ಪಿಸಲು ಬಜೆಟ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಗ್ರಾಮೀಣ ಹಾಗೂ ನಗರಗಳ ನಡುವಿನ ಸಂಪರ್ಕವನ್ನು ಗಟ್ಟಿಗೊಳಿಸಲು ಉದ್ದೇಶಿಸಲಾಗಿದೆ.

ರುಪೇ ಕಾರ್ಡ್ ಯೋಜನೆ;

ಕೇಂದ್ರ ಸರ್ಕಾರ ರೂಪೇ ಕಾರ್ಡ್ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿದೆ. ಈ ಮೂಲಕ ಟೋಲ್ ಶುಲ್ಕ, ಪಾಕಿರ್ಂಗ್ ಶುಲ್ಕ ಸೇರಿದಂತೆ ಎಲ್ಲಾ ಶುಲ್ಕಗಳ ಪಾವತಿ ಹಾಗೂ ಎಟಿಎಂಗಳಿಂದ ಹಣ ಪಡೆಯಲು ಸಹ ಒಂದೇ ಕಾರ್ಡ್ ಬಳಸಲು ಅನುವಾಗುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆ ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ.
ಈ ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಚರ್ಚಿಸಿ ನಂತರ ಪೂರ್ಣ ಪ್ರಮಾಣದ ಯೋಜನೆಯನ್ನು ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಆಟೋ ಮೊಬೈಲ್ ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಒತ್ತು

ಶೀಘ್ರ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ರಿಯಲ್ ಎಸ್ಟೇಟ್, ಬ್ಯಾಂಕಿಂಗ್, ಹೊಸ ಸ್ಟಾರ್ಟಪ್ ಉದ್ದಿಮೆಗಳು ಹಾಗೂ ಆಟೋ ಮೊಬೈಲ್ ಕ್ಷೇತ್ರಗಳ ಅಭಿವೃದ್ಧಿಯ ಕಡೆಗೆ ಹೆಚ್ಚು ಗಮನವಹಿಸಿದೆ. ಆಟೋ ಮೊಬೈಲ್ ಕ್ಷೇತ್ರದಲ್ಲಿ ಎಲೆಕ್ಟ್ರಿಕಲ್ ವಾಹನಗಳ ಮೇಲೆ ಭಾರೀ ಹೂಡಿಕೆ ಮಾಡಲು ಮುಂದಾಗಿರುವ ಸರ್ಕಾರ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಿದೆ. ಈ ಮೂಲಕ ಮಾಲಿನ್ಯವನ್ನು ನಿಯಂತ್ರಿಸಿ ಆಟೋ ಮೊಬೈಲ್ ಕ್ಷೇತ್ರದಲ್ಲಿ ಇಕೋ-ಅಭಿವೃದ್ಧಿ ಸಾಧಿಸುವುದು ಸರ್ಕಾರದ ಗುರಿ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಇದಲ್ಲದೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಸಾಕಾರಕ್ಕಾಗಿ ಸಾರ್ವಜನಿಕ ಕ್ಷೇತ್ರದಲ್ಲಿನ ಮೂಲಭೂತ ಸೌಲಭ್ಯ, ರಿಯಲ್ ಎಸ್ಟೇಟ್, ಜೀವವಿಮೆ ಹಾಗು ಮಾಧ್ಯಮ ಕ್ಷೇತ್ರದಲ್ಲಿ ಶೇ.100 ರಷ್ಟು ವಿದೇಶಿ ಬಂಡವಾಳ ಹೂಡಿಕೆ, ಬೃಹತ್ ಯೋಜನೆಗಳಿಗೆ ಆದ್ಯತೆ, ಅಂತರೀಕ್ಷ ತಂತ್ರಜ್ಞಾನದಲ್ಲಿ ಸಾರ್ವಭೌಮತ್ವ, ಆಹಾರ ಸ್ವಾವಲಂಭನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹೀಗೆ 5 ಟ್ರಿಲಿಯನ್ ಆರ್ಥಿಕತೆ ಸಾಧನೆಗೆ ಈ ಭಾರಿಯ ಮಹತ್ವದ ಬಜೆಟ್‍ನಲ್ಲಿ ಹತ್ತಾರು ಯೋಜನೆಗಳನ್ನು ರೂಪಿಸಲಾಗಿದೆ.