ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ವಿನೂತನ ಮಾದರಿಯಲ್ಲಿ ನಡೆದ ಶಾಲಾ ಮಂತ್ರಿಮಂಡಲದ ಪ್ರಮಾಣವಚನ ಸ್ವೀಕಾರ – ಕಹಳೆ ನ್ಯೂಸ್
ನರಿಮೊಗರು :- ಶಾಲೆ ಪ್ರಾರಂಭವಾಗಿ ವಿದ್ಯಾರ್ಥಿಗಳು ತಮ್ಮ ತಮ್ಮ ಚಟುವಟಿಗೆಗಳಲ್ಲಿ ತೊಡಗಿಕೊಳ್ಳಲು ಶುರು ಮಾಡುತ್ತಿದ್ದಂತೆ ಶಾಲಾ ಮಂತ್ರಿ ಮಂಡಲದ ಸಂಭ್ರಮ ಆರಂಭವಾಗುತ್ತದೆ. ಆದ್ರೆ ಸಾಮಾನ್ಯವಾಗಿ ಅನೇಕ ಶಾಲೆಗಳು ಶಾಲಾ ಮಂತ್ರಿ ಮಂಡಲದ ಆಯ್ಕೆಯನ್ನ ಸರಳವಾಗಿ ಮಾಡುತ್ತಾರೆ. ಆದರೆ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ನರಿಮೊಗರು ಇಲ್ಲಿ ಇತರ ಶಾಲೆಗಳಿಗೆ ಮಾದರಿಯಾಗುವಂತೆ ವಿನೂತನ ರೀತಿಯಲ್ಲಿ ಶಾಲಾ ಮಂತ್ರಿಮಂಡಲದ ಪ್ರಮಾಣವಚನ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳು ಹಾಗು ಮಂತ್ರಿಮಂಡಲದ ನೂತನ ಸದಸ್ಯರನ್ನು ಘೋಷ ವಾದನದೊಂದಿಗೆ ವೇದಿಕೆಗೆ ಬರಮಾಡಿಕೊಂಡು ರೈತ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಮಾಲಾ ವಿ.ಎನ್ ಎಲ್ಲರನ್ನು ಸ್ವಾಗತಿಸಿ, ಶಾಲಾ ನಾಯಕಿ ಹಾಗೂ ಮಂತ್ರಿಮಂಡಲದ ನೂತನ ಸದಸ್ಯರಿಗೆ ಪ್ರಮಾಣವಚನ ಭೋದಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೋರ್ಕರ್ ನೂತನ ಸದಸ್ಯರನ್ನು ಅಭಿನಂದಿಸಿ ವಿದ್ಯಾ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಶ್ರೀ ಕೃಷ್ಣಪ್ರಸಾದ್ ಕೆದಿಲಾಯ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಸಹಶಿಕ್ಷಕಿಯಾದ ಶ್ರೀಮತಿ ಪ್ರೀತಿ ಕಾರ್ಯಕ್ರಮ ನಿರೂಪಿಸಿ , ಶ್ರೀ ರಮೇಶ್ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಯಿತು..