ಕಡಬ ; ಗಾಂಜಾ ನೀಡಿ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಭಂದಿಸಿದ ದೃಶ್ಯಾವಳಿಯ ವೀಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೋವನ್ನ ವೈರಲ್ ಮಾಡಿದ ಆರೋಪಿಗಳನ್ನು ಪೊಲೀಸ್ ಅಧಿಕಾರಿಗಳು ಜೈಲಿಗಟ್ಟಿದ್ದರು.. ಇದೀಗ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಡಬದ ಬೆಳಂದೂರು ನಿವಾಸಿ ಕೆ.ಶೌಕತ್ ಆಲಿ(34), ಕಡಬದ ಬೆಳಂದೂರು ಗ್ರಾಮಪಂಚಾಯತ್ ಸದಸ್ಯ ನಜೀರ್ ದೇವಸ್ಯ, ಕಡಬ ಪಲ್ಲತರ್ ನಿವಾಸಿ ಜಾಬೀರ್ ಬಂಧಿತ ಆರೋಪಿಗಳು ಎಂದು ಮಾನ್ಯ ಪೊಲೀಸ್ ಉಪಾಧೀಕ್ಷಕರು ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಪೊಲೀಸ್ ಉಪಾಧೀಕ್ಷಕರಾದ ದಿನಕರ ಶೆಟ್ಟಿಯವರು. ಮಾನ್ಯ ಎಸ್.ಪಿ ಶ್ರೀ ಲಕ್ಷೀಪ್ರಸಾದ್‍ರವರ ಆದೇಶದ ಮೇರೆಗೆ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಎಲ್ಲರ ಮೇಲೆ ನಿಗ ಇಡಲಾಗಿದೆ. ಮುಂದಿನ ದಿನಗಳಲ್ಲಿ ಯಾರೆಲ್ಲ ಈ ವಿಡಿಯೋಗಳನ್ನೂ ಹಂಚಿಕೆ ಮಾಡಿದ್ದಾರೆ ಎಂಬುದನ್ನು ತನಿಖೆ ನಡೆಸುತ್ತೇವೆ ಎಂದಿದ್ದಾರೆ.
ಈ ಹಿಂದೆ ವಿಡಿಯೋ ಹಂಚಿಕೆಗೆ ಸಂಬಂಧಿಸಿ 8 ಜನರನ್ನು ಪೊಲೀಸರು ಬಂಧಿಸಿದ್ದು, ಇದೀಗ ಮತ್ತೆ 3ರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಮೊಬೈಲ್‍ನಲ್ಲಿ ವಿಡಿಯೋ ಹರಿದಾಡಿದೆ ಎಂದು ಪತ್ತೆ ಹಚ್ಚಿ, ಯಾರೆಲ್ಲ ಕಂಬಿ ಎಣಿಸಲಿದ್ದಾರೆ ಕಾದು ನೋಡಬೇಕಾಗಿದೆ.