ಬಂಟ್ವಾಳ: ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳ ನಡುವೆ ಸಮನ್ವಯತೆಯಿಂದ ಕೆಲಸ ಮಾಡಿದಾಗ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳು ಆಗುವುದಿಲ್ಲ. ಪ್ರತಿಯೊಬ್ಬರೂ ಆ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಹಾಗೂ ಅಭಿವೃದ್ಧಿ ಕಾರ್ಯಕ್ರಮ ಗಳ ಉದ್ಘಾಟನೆ ನಡೆಸಿದ ಬಳಿಕ ಪಂ. ಸಭಾಂಗಣದಲ್ಲಿ “ಗ್ರಾಮದ ಕಡೆ ಶಾಸಕರ ನಡೆ” ಗ್ರಾಮ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾ.ಪಂ. ಸದಸ್ಯರುಗಳಿಗೆ ವಿಶೇಷವಾದ ಜವಬ್ದಾರಿ ಇದೆ, ಜನರ ಕೆಲಸ ಮಾಡಲು ದೇವರು ಅವಕಾಶ ನೀಡಿದ್ದಾರೆ. ನಮ್ಮ ಅವಧಿಯಲ್ಲಿ ಜನರು ನೆನಪು ಇಡುವ ಉತ್ತಮ ಕಾರ್ಯಕ್ರಮ ಮಾಡುವ ಉದ್ದೇಶದಿಂದ ಗ್ರಾಮ ಸ್ಪಂದನ ಕಾರ್ಯಕ್ರಮ ಅಯೋಜಿಸಿದ್ದೇನೆ ಎಂದು ಅವರು ಹೇಳಿದರು.
ಈಗಾಗಲೇ ಈ ಗ್ರಾಮಕ್ಕೆ 1.ಕೋಟಿ 35 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಈ ಗ್ರಾಮದ ಅಭಿವೃದ್ಧಿಗೆ ಕೊಡುಗೆ ನೀಡುತ್ತೇನೆ ಎಂದರು. ಗ್ರಾಮ ಅಭಿವೃದ್ಧಿಯಾದಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂಬ ಕಲ್ಪನೆಯಲ್ಲಿ ನಾವು ಒಂದಾಗಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪಣತೊಡಬೇಕು ಎಂದರು.
ರಾಜಧರ್ಮವನ್ನು ಪಾಲಿಸಿಕೊಂಡು, ನಿಮ್ಮ ಸೇವಕನಾಗಿ ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ. ಗ್ರಾಮದ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಗ್ರಾಮಸ್ಥರು ಕೈಜೊಡಿಸಿ, ಈ ಗ್ರಾಮವನ್ನು ರಾಮರಾಜ್ಯ ಮಾಡಲು ಸಹಕಾರ ನೀಡಿ ಎಂದು ಅವರು ಹೇಳಿದರು.
ಆ ಬಳಿಕ ಶಾಸಕರು ಅಧಿಕಾರಿಗಳು ಹಾಗೂ ಸದಸ್ಯರ ಜೊತೆ ಪ್ರತ್ಯೇಕ ಸಭೆ ನಡೆಸಿ ಬಾಕಿಯಾದ ಅಭಿವೃದ್ದಿ ಕಾರ್ಯಕ್ರಗಳು ಹಾಗೂ ಜನರ ಬೇಡಿಕೆಗಳು ಯಾವುದು ಇವೆ ಎಂದು ಮಾಹಿತಿಯನ್ನು ಪಡೆದುಕೊಂಡರು.
ಸರಕಾರದ ಯೋಜನೆಗಳು ಸರಿಯಾಗಿ ಜಾರಿಯಾಗುವಂತೆ ಮಾಡಬೇಕಾದ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಹೇಳಿದರು. ಪಂಚಾಯತ್ ವ್ಯಾಪ್ತಿಯಲ್ಲಿ ಸ್ಮಶಾನ ಕಡ್ಡಾಯವಾಗಿ ಇರಲೇಬೇಕು ಎಂದ ಅವರು ಸ್ಮಶಾನ ನಿರ್ಮಾಣಕ್ಕೆ ಈ ಪಂಚಾಯತ್‍ನಲ್ಲಿರುವ ಸಮಸ್ಯೆ ಶೀಘ್ರವಾಗಿ ಬಗೆಹರಿಸಿ ಎಂದು ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.
ಹೌಸಿಂಗ್ ಮತ್ತು ಸೈಟ್ ನಿರ್ಮಾಣದ ಬಗ್ಗೆ ಮಾಹಿತಿ ಪಡೆದ ಅವರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಸಿ ಮುಂದಾಗುವಂತೆ ಹೇಳಿದರು. ಈ ಬಗ್ಗೆ ಪಂಚಾಯತ್ ಮಟ್ಟದಲ್ಲಿ ಸದಸ್ಯರು ಚರ್ಚೆ ನಡೆಸಿ ನಿರ್ಣಯ ಮಾಡಿ ಸರ್ಕಾರ ಕ್ಕೆ ಕಳುಹಿಸಿ, ಈ ಯೋಜನೆ ಸರಕಾರದಿಂದ ಜಾರಿಯಾಗುವಂತೆ ಮಾಡಲು ಒತ್ತಡ ಹಾಕುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಬಹುಗ್ರಾಮ ನೀರಿನ ಯೋಜನೆ, ನರೇಗಾ ಯೋಜನೆ, ನಿವೇಶನ, ತ್ಯಾಜ್ಯ, ಹಾಗೂ ನೀರಿನ ಸಮಸ್ಯೆ ಬರದಂತೆ ತಡೆಯಲು ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಅವರು ಹೇಳಿದರು. ಸರಕಾರದ ಹಣ ಅನಾವಶ್ಯಕ ವ್ಯಯವಾಗದಂತೆ ನೋಡಿಕೊಂಡು ಜನಪಯೋಗಿ ಕಾರ್ಯಕ್ರಮಗಳನ್ನು ಹಾಕಿ ಕೊಳ್ಳುವಂತೆ ತಿಳಿಸಿದರು.
ಈ ಸಮಯದಲ್ಲಿ ಫಲಾನುಭವಿಗಳಿಗೆ 94 ಸಿ, ಅಂಗವಿಕಲ, ಹಾಗೂ ಕಂಪ್ಯೂಟರ್ ಶಿಕ್ಷಣ ಉತ್ತೇಜನದ ಚೆಕ್ ವಿತರಣೆ ನಡೆಸಿದರು.
ಈ ವೇಳೆ ಜಿ.ಪಂ.ಸದಸ್ಯೆ ಕಮಲಾಕ್ಷೀ ಪೂಜಾರಿ, ತಾ.ಪಂ.ಲಕ್ಷ್ಮೀ ಗೋಪಾಲಾಚರ್ಯ , ಗ್ರಾ.ಪಂ.ಅಧ್ಯಕ್ಷ ವಿಠಲ ನಾಯ್ಕ, ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯ ರಾದ ಪಿ.ಎಸ್.ಮೋಹನ್, ಆನಂದ ಶೆಟ್ಟಿ, ವಿಶ್ವನಾಥ ನಾಯ್ಕ, ವಸಂತ ಸಾಲಿಯಾನ್, ಗುಲಾಬಿ, ಪುಷ್ಪಾ ಬಿ.ಶೆಟ್ಟಿ, ಜಯಶ್ರೀ ಗಣೇಶ್, ಶಿವರಾಜ್, ಸುಂದರ ಸಾಲಿಯಾನ್, ವೀಣಾ, ರೇಣುಕಾ, ವೆಂಕಟರಾಯ ಪ್ರಭು, ಪಂಚಾಯತ್ ರಾಜ್ ಇಂಜಿನಿಯರ್ ಪದ್ಮರಾಜ್, ಪಿ.ಡಿ.ಒ. ಸಂಧ್ಯಾ, ಕಂದಾಯ ನಿರೀಕ್ಷಕ ರಾಮ, ಗ್ರಾಮ ಕರಣೀಕ ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಳ್ತಿಲ ವಲಯ ಮೇಲ್ವಿಚಾರಕಿ ಶಾಲಿನಿ, ವೈದ್ಯಾಧಿಕಾರಿ ವಿಶ್ವೇಶ್ವರ ವಿ.ಕೆ. ಮೆಸ್ಕಾಂ ಜೆ.ಇ. ಸದಾಶಿವ ಜೆ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಬಾಲಭವನ ಮಾಜಿ ರಾಜ್ಯಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್ ಬಿಜೆಪಿ ಪ್ರಮುಖರಾದ ಚೆನ್ನಪ್ಪ ಆರ್ ಕೋಟ್ಯಾನ್, ದಿನೇಶ್ ಅಮ್ಟೂರು, ದೇವದಾಸ ಶೆಟ್ಟಿ, ಬಿ.ಕೆ. ಅಣ್ಣಿಪೂಜಾರಿ, ಗಣೇಶ್ ರೈ ಮಾಣಿ, ಅಭಿಷೇಕ್ ರೈ ವಿಟ್ಲ, ರಾಧಾಕೃಷ್ಣ ಅಡ್ಯಂತಾಯ, ಆನಂದ ಶಂಭೂರು, ಲೋಕಾನಂದ ಏಳ್ತಿಮಾರ್, ಸುರೇಶ್ ಶೆಟ್ಟಿ ಕಾಂಜಿಲ, ಶರತ್ ನೀರಪಾದೆ, ರಮೇಶ್ ಕುದ್ರೆಬೆಟ್ಟು, ಪ್ರದೀಪ್ ಅಜ್ಜಿಬೆಟ್ಟು, ಸುದರ್ಶನ ಬಜ, ಆಶೋಕ್, ಚಂದ್ರಶೇಖರ್ ಚೆಂಡೆ, ಲೋಹಿತಾಕ್ಷ ಬೆರ್ಕಳ, ಗಣೇಶ್ ಶೆಟ್ಟಿ ಸುಧೆಕಾರ್, ಮತ್ತಿತರರು ಉಪಸ್ಥಿತರಿದ್ದರು.