Wednesday, January 22, 2025
ರಾಜಕೀಯ

ಈ ಮೈತ್ರಿ ಸರ್ಕಾರ ಮುಂದುವರಿಯಬೇಕು, ಇದು ನಮ್ಮೆಲ್ಲರ ಬಯಕೆ – ಮಲ್ಲಿಕಾರ್ಜುನ ಖರ್ಗೆ – ಕಹಳೆ ನ್ಯೂಸ್

ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸುಗಮವಾಗಿ ಮುಂದುವರಿಯಬೇಕು ಎಂಬುದು ನಮ್ಮೆಲ್ಲರ ಬಯಕೆಯಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಈ ಮೈತ್ರಿ ಸರ್ಕಾರ ಮುಂದುವರಿಯಬೇಕು. ಇವೆಲ್ಲ ನಮ್ಮನ್ನು ವಿಭಜಿಸಲು ಸುಳ್ಳು ಸುದ್ದಿಗಳನ್ನು ಮಾಧ್ಯಮಗಳಿಗೆ ನೀಡಲಾಗುತ್ತಿದೆಯಷ್ಟೆ, ಸರ್ಕಾರ ಮುರಿಯಲು ಯಾರಿಗೂ ಮನಸ್ಸಿಲ್ಲ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ತಮ್ಮನ್ನು ಮುಖ್ಯಮಂತ್ರಿ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ ಎಂದು ಕೇಳಿದ್ದಕ್ಕೆ, ಈ ಬಗ್ಗೆ ನನಗೇನು ಗೊತ್ತಿಲ್ಲ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿರಿಯ ನಾಯಕ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ಬಗ್ಗೆ ಕೇಳಿದಾಗ, ರಾಮಲಿಂಗಾ ರೆಡ್ಡಿಯವರು ಹಿರಿಯ ನಾಯಕರು, ಕಾಂಗ್ರೆಸ್ ನಾಯಕ, ಬೆಂಗಳೂರಿನಲ್ಲಿ ಸುದೀರ್ಘ ವರ್ಷಗಳಿಂದ ಕಾಂಗ್ರೆಸ್‍ನ ಕೋಟೆಯನ್ನು ಹಿಡಿದಿಟ್ಟುಕೊಂಡಿದ್ದಾರೆ. ಅವರ ಬೇಡಿಕೆಗಳೇನು, ಸಮಸ್ಯೆಗಳೇನು ಎಂದು ತಿಳಿದುಕೊಂಡು ಅದಕ್ಕೆ ನಾವೇನು ಮಾಡಬಹುದು ಎಂದು ನೋಡೋಣ ಎಂದು ಹೇಳಿದರು.