Tuesday, January 21, 2025
ಸಿನಿಮಾ

ಜಯಣ್ಣನೊಂದಿಗೆ ರುದ್ರ ಯಾಗಕ್ಕಿಳಿದ ರಿಷಭ್ ಶೆಟ್ಟಿ – ಕಹಳೆ ನ್ಯೂಸ್

ಕನ್ನಡ ಚಿತ್ರರಂಗ ಈಗ ಮೊದಲಿನಂತಿಲ್ಲ, ಹೊಸ ಹೊಸ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಕನ್ನಡ ಚಿತ್ರರಂಗವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ. ಅಂತಹ ನಿರ್ದೇಶಕರಲ್ಲಿ ರಿಷಭ್ ಶೆಟ್ಟಿ ಕೂಡಾ ಒಬ್ಬರು. ಇಂದು ರಿಷಭ್ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದ ಜೊತೆಗೆ ತಮ್ಮ ಮುಂದಿನ ಚಿತ್ರ ‘ರುದ್ರ ಪ್ರಯಾಗ’ದ ಟೈಟಲ್ ಪೋಸ್ಟರನ್ನು ಕೂಡ ರಿಷಭ್ ರಿಲೀಸ್ ಮಾಡಿದ್ದಾರೆ. ಪೋಸ್ಟರ್ ಗಮನಿಸುತ್ತಿದ್ದಂತೆ ಇದೊಂದು ವಿಭಿನ್ನ ಕಥಾಹಂದರದ ಚಿತ್ರ ಎಂದು ಮನದಟ್ಟಾಗುತ್ತದೆ.

ಕಾರಣ ಚಿತ್ರದ ಟೈಟಲ್ ಪ್ರಕಾರ ‘ರುದ್ರ ಪ್ರಯಾಗ’ ಎಂಬುವುದು ಉತ್ತರಾಖಂಡ್ ರಾಜ್ಯದ ಒಂದು ಪವಿತ್ರ ಸ್ಥಳ. ಅದಕ್ಕೆ ಸಾಕ್ಷಿ ಎಂಬಂತೆ ಪೋಸ್ಟರ್‍ನಲ್ಲಿ ರುದ್ರ ಪ್ರಯಾಗದ ಪ್ರಕೃತಿ ರಮಣೀಯವಾದ ಬೆಟ್ಟದ ಸಾಲುಗಳು ಇವೆ. ಇನ್ನೊಂಡೆದೆ ಮರದ ಮೇಲೆ ವಿಶ್ರಾಂತ ಭಂಗಿಯಲ್ಲಿ ಕುಳಿತಿರುವ ಚಿರೆತೆ. ಚಿರತೆ ರುದ್ರಪ್ರಯಾಗದಲ್ಲಿ ಹೆಚ್ಚಾಗಿ ಕಾಣಸಿಗುವ ವನ್ಯ ಮೃಘವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪೋಸ್ಟರ್‍ ನಲ್ಲಿ ಕಾಣಸಿಗುವ ಮತ್ತೊಂದು ಅಂಶವೆಂದರೆ ರಾಣಿ ಚೆನ್ನಮ್ಮನ ಪ್ರತಿಮೆ. ರಾಣಿ ಚೆನ್ನಮ್ಮನ ಪ್ರತಿಮೆ ಇರುವುದು ಹುಬ್ಬಳ್ಳಿಯಲ್ಲಿ ಆದ ಕಾರಣ ‘ರುದ್ರ ಪ್ರಯಾಗ’ದ ಕಥೆ ಎರಡು ರಾಜ್ಯಗಳಲ್ಲಿ ಸಾಗುತ್ತದೆ ಎಂಬುವುದು ಖಚಿತವಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇವಲ್ಲದೆ ಪೋಸ್ಟರ್‍ ನಲ್ಲಿರುವ ಮಗದೊಂದು ಸ್ವಾರಸ್ಯಕರ ಸಂಗತಿಯೇನೆಂದರೆ, ವಿಶ್ರಾಂತ ಭಂಗಿಯಲ್ಲಿ ಕುಳಿತಿರುವ ಚಿರತೆಯ ಮುಖದ ಮೇಲೆ ಟಾರ್ಚ್ ಬೆಳಕೊಂದು ಬೀಳುತ್ತಿದೆ. ಆ ಟಾರ್ಚ್‍ನ್ನು ಯಾರು, ಎಲ್ಲಿಂದ ಹಾಕುತ್ತಿದ್ದಾರೆ ಎಂಬುದನ್ನು ಬಿಟ್ಟುಕೊಟ್ಟಿಲ್ಲ ರಿಷಭ್ ಶೆಟ್ಟಿ.

‘ರುದ್ರ ಪ್ರಯಾಗ’ವನ್ನು ಜಯಣ್ಣ ನಿರ್ಮಿಸುತ್ತಿದ್ದು ಚಿತ್ರದ ನಾಯಕ ನಟ, ಸಂಗೀತ ನಿರ್ದೇಶಕ ಎಂಬಿತ್ಯಾದಿ ಯಾವುದೇ ವಿಚಾರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಕಥೆಗಳನ್ನು ರಚಿಸಿ ನಿರ್ದೇಶಿಸುವ ರಿಷಭ್ ಶೆಟ್ಟಿ, ಕನ್ನಡ ಚಿತ್ರರಂಗದ ಭವಿಷ್ಯದ ಸ್ಟಾರ್ ಮೇಕರ್ ಎನ್ನುವುದರಲ್ಲಿ ಎರಡು ಮಾತಿಲ್ಲ.