ಬಂಟ್ವಾಳ: ರಾಷ್ಟ್ರಸೇವಕನಾಗಿ, ರಾಷ್ಟ್ರೀಯವಾದ ಮತ್ತು ಹಿಂದುತ್ವದ ಪ್ರತಿಪಾದಕನಾಗಿ ಸಂಘದ ಶಿಸ್ತಿನ ಸ್ವಯಂಸೇವಕನಾಗಿ, ಹೆಬ್ಬಾಳದಲ್ಲಿ 1 ವರ್ಷಗಳ ಕೃಷಿ ತರಬೇತಿ ಪಡೆದು ದಾರಾವಾಡ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ನಡೆಸಿ, ಎಳೆಯ ವಯಸ್ಸಿನಲ್ಲೇ ತನ್ನನ್ನು ಕೃಷಿಯಲ್ಲಿ ತೊಡಗಿಸಿಕೊಂಡು ಯುವಕರಿಗೆ ಮಾದರಿಯಾಗಬಲ್ಲ ಕೃಷಿಕನಾಗಿದ್ದ ಹುತಾತ್ಮ ಶರತ್ ಮಡಿವಾಳ.
ಇಂದು ಸ್ವಯಂಸೇವಕ ದಿ.ಶರತ್ ಮಡಿವಾಳರವರ ಬಲಿದಾನದ ದಿನ. ಅವರ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ ತಾಯಿ ಭಾರತೀಯ ಸೇವೆಗೆ ಜೀವನವನ್ನೇ ಮುಡಿಪಾಗಿಟ್ಟು ವೀರ ಹುತಾತ್ಮನಾದ ಎನ್. ಶರತ್ ಮಡಿವಾಳ ಇವರ ಬಲಿದಾನದ ಗೌರವಾರ್ಥವಾಗಿ ಜುಲೈ 8ರಂದು ಬೆಳಿಗ್ಗೆ 9 ಗಂಟೆಗೆ ಸಜೀಪಮುನ್ನೂರು ಪಾಡಿಮನೆ, ಮಡಿವಾಳಪಡ್ಪುನಲ್ಲಿ, ಅವರಿಗೆ ನಮನ ಸಲ್ಲಿಸಿ ಪುಷ್ಪಾರ್ಚನೆ ನಡೆಯಲಿದೆ.
ನಂತರ ಕಂದೂರು ಶ್ರೀಕೃಷ್ಣ ಶಿಶು ಮಂದಿರ ಹಾಗೂ ಸರಕಾರಿ ಪ್ರಾಥಮಿಕ ಶಾಲೆ ಶಾಂತಿನಗರ ಇದರ ವಠಾರದಲ್ಲಿ ಪುಟಾಣಿ ಮಕ್ಕಳ ಸಹಭಾಗಿತ್ವದಲ್ಲಿ ಹುತಾತ್ಮ ಶರತ್ ಸವಿ ನೆನೆಪಿಗಾಗಿ ವನಮಹೋತ್ಸವ ಕಾರ್ಯಕ್ರಮ ನಡೆಯಲಿದೆ.
ಸಹೃದಯಿ ಹಿಂದೂ ಬಂಧುಗಳು, ಶರತ್ ಅಭಿಮಾನಿಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹುತಾತ್ಮ ಸ್ವಯಂಸೇವಕನ ಗೌರವಾರ್ಥವಾಗಿ ಪಾಲ್ಗೊಂಡು ಪುಷ್ಪ ನಮನ ಸಲ್ಲಿಸ ಬೇಕಾಗಿ ವಿನಂತಿ ಮಾಡಿಕೊಂಡಿದ್ದಾರೆ.
ಪ್ರತಿಯೊಬ್ಬ ರಾಷ್ಟ್ರಭಕ್ತ ಹಿಂದೂಗಳು ಹುತಾತ್ಮ ಶರತ್ ಮಡಿವಾಳರ ಗೌರವಾರ್ಥವಾಗಿ ತಮ್ಮ ತಮ್ಮ ಮನೆ, ಊರು, ದೇವಸ್ಥಾನ, ಮಂದಿರ ಸಂಘ ಸಂಸ್ಥೆಗಳ ವಠಾರದಲ್ಲಿ ಕೇಸರಿ ಧ್ವಜ ಪ್ರತಿಷ್ಠಾಪಿಸಿ, ಪುಷ್ಪಾರ್ಚನೆ ಸಲ್ಲಿಸಿ, ನಂತರ ಗಿಡಗಳನ್ನು ನೆಡುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ.