Tuesday, January 21, 2025
ಸಿನಿಮಾ

‘ಕುರುಕ್ಷೇತ್ರ’ ಚಿತ್ರದ ಟ್ರೇಲರ್​ ಕುರಿತು ಅಭಿಮಾನಿಗಳು ಆಕ್ರೋಶ

ಬೆಂಗಳೂರು: ನಿನ್ನೆ(ಭಾನುವಾರ) ರಾತ್ರಿಯಷ್ಟೇ ಬಿಡುಗಡೆಯಾದ ಸ್ಯಾಂಡಲ್​​ವುಡ್​ನ ಬಹುತಾರಾಗಣದ ಹಾಗೂ  ಬಹುನಿರೀಕ್ಷಿತ ‘ಕುರುಕ್ಷೇತ್ರ’ ಚಿತ್ರದ ಟ್ರೇಲರ್​ ಕುರಿತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಮೂಲಕ ಅಸಮಾಧಾನ ಹೊರಹಾಕಿರುವ ಅಭಿಮಾನಿಗಳು, ಈ ಹಿಂದಿನ ಟೀಸರ್​ಗಳನ್ನೇ ಜೋಡಿಸಿ ನಿರ್ಮಾಪಕ ಮುನಿರತ್ನ ಅವರು ಟ್ರೈಲರ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ದುರ್ಯೋಧನ ಪಾತ್ರದಲ್ಲಿ ನಟಿಸಿರುವ ದರ್ಶನ್​ ಹಾಗೂ ಅಭಿಮನ್ಯು ಪಾತ್ರದಲ್ಲಿ ಮಿಂಚಿರುವ ನಿಖಿಲ್​ ಕುಮಾರಸ್ವಾಮಿಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಟೀಸರ್​ಗಳನ್ನು ಈ ಹಿಂದೆ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿದ್ದ ದೃಶ್ಯಗಳೇ ಈಗ ಬಿಡುಗಡೆಗೊಂಡಿರುವ ಟ್ರೇಲರ್​ನಲ್ಲಿಯೂ ಇದೆ ಎಂಬುದು ಅಭಿಮಾನಿಗಳ ಆಕ್ರೋಶವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಟ್ರೈಲರ್​ ಕೊನೆಯಲ್ಲಿ ಬರುವ ದರ್ಶನ್ ಹಾಗು‌ ಭೀಮನ ಪಾತ್ರದಲ್ಲಿ ಅಭಿನಯಿಸಿರುವ ಡ್ಯಾನಿಶ್ ನಡುವಿನ ಗದಾ ಪ್ರಹಾರ ದೃಶ್ಯ ಬಿಟ್ಟರೆ, ಉಳಿದೆಲ್ಲಾ ದೃಶ್ಯಗಳು ಟೀಸರ್ ನಲ್ಲಿದ್ದ ದೃಶ್ಯಗಳೇ ಎಂದು ಸಾಮಾಜಿಕ ಜಾಲಾತಾಣದಲ್ಲಿ ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಚಿತ್ರದ ಗ್ರಾಫಿಕ್ಸ್ ಬಗ್ಗೆಯು ಅಭಿಮಾನಿಗಳಿಂದ ಅಪಸ್ವರ ಕೇಳಿಬರುತ್ತಿದೆ. ಹೀಗಾಗಿ ಶನಿ ಸೀರಿಯಲ್ಲೇ ಬೆಸ್ಟ್​, ಕನ್​ಫ್ಯೂಸ್​ ಆಗಿ ಮತ್ತೆ ಟೀಸರ್​ ಅಪ್​ಲೋಡ್​ ಮಾಡಿದ್ದೀರ ಹಾಗೂ ವ್ಯಾಸರು ಕೂಡ ಮುನಿರತ್ನರೇ ಅಲ್ಲವೇ ಎಂದು ಟ್ರೋಲ್​ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಕೋರಮಂಗಲದ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಟ್ರೇಲರ್​ ಬಿಡುಗಡೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಚಾಲೆಂಜಿಂಗ್​​ ಸ್ಟಾರ್​ ದರ್ಶನ್​ ಉಪಸ್ಥಿತರಿದ್ದರು. ಆದರೆ, ನಿಖಿಲ್​ ಹಾಜರಾಗದಿದ್ದಕ್ಕೆ ಮಂಡ್ಯ ರಾಜಕಾರಣ ಹಾಗೂ ಮುನಿರತ್ನ ರಾಜೀನಾಮೆ ಕಾರಣ ಎಂದು ಹೇಳಲಾಗುತ್ತಿದೆ.