Highlights :
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಮಹಿಳೆಯರ ಮುಂದೆ ಅವಾಚ್ಯ ಪದ ಬಳಸಿ ನಿಂದನೆ ಮಾಡಿದ ಸಂಪ್ಯ ಠಾಣಾ ಎಸ್. ಐ .ಅಬ್ದುಲ್ ಖಾದರ್ ಮೇಲೆ ಎಸ್.ಪಿ. ದೂರು ನೀಡಿದ್ದಾರೆ.
ಪುತ್ತೂರು : ಪುತ್ತೂರು ಗ್ರಾಮಾಂತರ ಠಾಣೆ ಸಂಪ್ಯ ಇದರ ಮುಂಭಾಗದಲ್ಲಿ ಅಲ್ಲಿನ ಎಸ್.ಐ ಅಬ್ದುಲ್ ಖಾದರ್ ಹಾಗೂ ಕೆಲ ಸಿಬಂದಿಗಳಿಂದ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಜಿಲ್ಲೆಯಲ್ಲಿ ನಿರಂತರವಾಗಿ ಹಿಂದೂಗಳ ಮೇಲಾಗುತ್ತಿರುವ ಹಲ್ಲೆ ಹಾಗೂ ದಬ್ಬಾಳಿಕೆಯನ್ನು ಖಂಡಿಸಿ ಪ್ರಜಾಪ್ರಭುತ್ವದ ರೀತಿಯಲ್ಲಿಯೇ ಮಹಿಳೆಯರ ಸಹಿತ ಬಿಜೆಪಿ ಮುಖಂಡರುಗಳು, ಸಂಘಟನೆಗಳ ಕಾರ್ಯಕರು ಪ್ರತಿಭಟನೆ ನಡೆಸುತ್ತಿದ್ದರು. ಆ ವೇಳೆ ಪ್ರತಿಭಟನಾಕಾರರ ವಿರುದ್ಧ ಏಕಾಏಕಿ ಸಭ್ಯರು ಕೇಳಲು ಅಸಹ್ಯ ಪಡುವ, ಅನಾಗರೀಕ ಅವಾಚ್ಯ ಪದ “ಏನು ಶ್ಯಾ******” ಎಂದು ಪುತ್ತೂರು ಗ್ರಾಮಾಂತರ ಠಾಣೆಯ ಎಸ್.ಐ ಅಬ್ದುಲ್ ಖಾದರ್ ರವರು ನಿಂದಿಸಿದ್ದಲ್ಲದೆ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ತಾವು ಸಹಿತ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶೈಲಜಾ ಭಟ್, ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ಹಾಗೂ ಇನ್ನಿತರ ಜನಪ್ರತಿನಿಧಿಗಳನ್ನು ಉದ್ರೇಕಿಸುವ ಮಾತುಗಳನ್ನು ಆಡಿರುತ್ತಾರೆ. ಇದಕ್ಕೆ ಸಂಬಂಧಪಟ್ಟ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದ್ದರಿಂದ ತಕ್ಷಣವೇ ಸಂಪ್ಯ ಠಾಣಾ ಎಸ್.ಐ. ಅಬ್ದುಲ್ ಖಾದರ್ ರವರ ಮೇಲೆ ದೂರನ್ನು ದಾಖಲಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಂಡು ತಮಗೆ ನ್ಯಾಯ ದೊರಕಿಸಬೇಕು ಎಂದು ದ ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡುರವರು ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಅಧೀಕ್ಷರಿಗೆ ದೂರು ನೀಡಿದ್ದಾರೆ.