Tuesday, January 21, 2025
ಸುದ್ದಿ

ಚರಂಡಿಗೆ ಬಿದ್ದ ಬಸ್, 29 ಸಾವು– ಕಹಳೆ ನ್ಯೂಸ್

ಉತ್ತರ ಪ್ರದೇಶ: ರಾಜ್ಯ ರಸ್ತೆ ಸಾರಿಗೆಗೆ ಸೇರಿದ ಡಬಲ್ ಡೆಕ್ಕರ್ ಬಸ್ಸೊಂದು, ಇಂದು ಬೆಳಿಗ್ಗೆ ಚರಂಡಿಗೆ ಬಿದ್ದು 29 ಜನರು ಸಾವಿಗೀಡಾದ ಘಟನೆ ನಡೆದಿದೆ.

ಲಖನೌನಿಂದ ದೆಹಲಿಗೆ ಹೋಗುತ್ತಿದ್ದ ಬಸ್, ಆಗ್ರಾ ಸಮೀಪ ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಚರಂಡಿಗೆ ಬಿದ್ದಿದೆ. ಬಸ್‍ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದು, ಉ.ಪ್ರದೇಶ ರಸ್ತೆ ನಿಗಮ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ ಘೋಷಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು