Tuesday, January 21, 2025
ಸಿನಿಮಾ

ಮುಗ್ಗರಿಸುತ್ತಾ ಮುನಿರತ್ನನ `ಕುರುಕ್ಷೇತ್ರ’ – ಬಿಗ್ಗೆಸ್ಟ್ ಪ್ಲಾಪ್ ಪಟ್ಟಿಗೆ ಸೇರುತ್ತಾ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ..? – ಕಹಳೆ ನ್ಯೂಸ್

ಹೌದು ಈ ಒಂದು ಪ್ರಶ್ನೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳನ್ನು ಕಾಡದೇ ಇರದು. ಕಾರಣ ಬಹುನಿರೀಕ್ಷೆಯಿಂದ ಅಭಿಮಾನಿಗಳು ಕಾಯುತ್ತಿದ್ದ ಮುನಿರತ್ನ ನಿರ್ದೇಶನದ `ಕುರುಕ್ಷೇತ್ರ’ದ ಟ್ರೈಲರ್ ರಿಲೀಸ್ ನಿನ್ನೆ ಆಗಿದೆ.

ಆದರೆ ಟ್ರೈಲರ್ ನೋಡಿದವರು, ದರ್ಶನ್ ಅಭಿಮಾನಿಗಳು ಚಿತ್ರದ ಮೇಲೆ ತೀವ್ರ ನಿರಾಸೆಗೊಳಗಾಗಿದ್ದಾರೆ. ಈ ಹಿಂದೆಯೇ ಚಿತ್ರದ ಮೂರು ಟೀಸರ್‍ ಗಳನನ್ನು ಬಿಟ್ಟಿದ್ದ ಚಿತ್ರತಂಡ, ಟೀಸರ್‍ ಗಳಿಗೆ ಒಳ್ಳೆಯ ಅಭಿಪ್ರಾಯಗಳು ಬಂದಿರಲಿಲ್ಲ. ಇದಕ್ಕೆ ಕಾರಣ ಕಳಪೆ ಗುಣಮಟ್ಟದ ಗ್ರಾಫಿಕ್ಸ್, ತೀರಾ ಸಪ್ಪೆ ಎನಿಸುವ ಸಂಕಲನ, ನಟರು ಧರಿಸಿರುವ ಕಾಸ್ಟ್ಯೂಮ್‍ಗಳು ನಾಟಕ ಕಂಪೆನಿಯಿಂದ ಬಾಡಿಗೆ ತಂದಂತಿದೆ ಎಂದು ಟೀಸರ್ ನೋಡಿದ ಪ್ರೇಕ್ಷಕ, ಚಿತ್ರತಂಡಕ್ಕೆ ಛೀಮಾರಿ ಹಾಕಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಇಷ್ಟಾದರೂ ಅಭಿಮಾನಿಗಳು ಟ್ರೈಲರ್‍ ನಲ್ಲಿ ಒಳ್ಳೆಯ ಗುಣಮಟ್ಟವನ್ನು ಮತ್ತು ಹೆಚ್ಚಿನ ಎಪಿಕ್ ದೃಶ್ಯಗಳಿರಬಹುದೆಂದು ತಾಳ್ಮೆಯಿಂದ ಚಿತ್ರತಂಡದ ಮೇಲೆ ನಂಬಿಕೆಯನ್ನಿಟ್ಟು ಕಾದಿದ್ದರು. ಆದರೆ ಅಭಿಮಾನಿಗಳ ಈ ಎಲ್ಲಾ ನಿರೀಕ್ಷೆಗಳು ಅಕ್ಷರಶಃ ಹುಸಿಯಾಗಿದೆ. ಮತ್ತು ‘ಮುನಿರತ್ನನ ಕುರುಕ್ಷೇತ್ರ’ ಚಿತ್ರವನ್ನು ಪಂಚ ಭಾಷೆಯಲ್ಲಿ ಬಿಡುಗಡೆಗೊಳಿಸುತ್ತೇವೆ ಎಂದು ಹೇಳಿಕೊಂಡಿದ್ದ ಚಿತ್ರತಂಡಕ್ಕೆ, ಸಿನಿರಸಿಕರು ಬೇಡಪ್ಪಾ ಬೇಡ ನಮ್ಮ ಕನ್ನಡ ಚಿತ್ರರಂಗದ ಮಾನ ಮರ್ಯಾದೆಯನ್ನು ಬೇರೆ ಚಿತ್ರರಂಗದ ಮುಂದೆ ಹರಾಜಾಕಬೇಡಿ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದಾರೆ.

ಕನ್ನಡ ಚಿತ್ರರಂಗವನ್ನು ನೆಕ್ಷ್ಟ್ ಲೆವೆಲೆಗೆ ಕೊಂಡೊಯ್ಯಲು ಕಾರಣವಾದ ಕೆಜಿಎಫ್, ಚಿತ್ರರಂಗವನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು ಸಜ್ಜಾಗಿರುವ ಅವನೇ ಶ್ರೀಮನ್ನಾರಾಯಣ, ಪಾಪ್‍ಕಾರ್ನ್ ಮಂಕಿ ಟೈಗರ್, ರಾಬರ್ಟ್ ಮುಂತಾದ ಚಿತ್ರಗಳ ಮುಂದೆ ಕುರುಕ್ಷೇತ್ರ ಮಂಕಾಗುವುದರಲ್ಲಿ ಅನುಮಾನವಿಲ್ಲ.

ಒಟ್ಟಿನಲ್ಲಿ ಕೇವಲ ದರ್ಶನ್ ಅಭಿನಯದಿಂದ ಚಿತ್ರ ಗೆದ್ದು ಮುನಿರತ್ನ ನಗೆ ಬೀರುತ್ತಾರ ಎಂದು ಆಗಸ್ಟ್ 2ರ ತನಕ ಕಾದು ನೋಡಬೇಕಾಗಿದೆ.