ಮಂಗಳೂರು: ಜುಲೈ 28ರಂದು ನಗರದ ಡಾನ್ ಬಾಸ್ಕೋ ಹಾಲ್‍ನಲ್ಲಿ ಜರುಗಲಿರುವ ಮಕ್ಕಿಮನೆ ಕಲಾವೃಂದ ಸಂಭ್ರಮ – 2019 ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಮಂಗಳಾದೇವಿ ದೇವಸ್ಥಾನದಲ್ಲಿ ಶನಿವಾರ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಪಿ. ರಮಾನಾಥ ಹೆಗ್ಡೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಕ್ಕಿಮನೆ ಕಲಾವೃಂದ ಸುದೇಶ್ ಜೈನ್ ಮಕ್ಕಿಮನೆ ಹಾಗೂ ವಿಜೇಶ್ ದೇವಾಡಿಗ ಮಂಗಳಾದೇವಿ, ಸತೀಶ್ ಸನಿಲ್ ಎಯ್ಯಾಡಿ, ಶ್ರೇಯಾ ದಾಸ್, ಧಾತ್ರಿ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.